ಇವರೇ ನೋಡಿ ವಾಯುಪಡೆಯ ಮೊದಲ ಮಹಿಳಾ ಕಮಾಂಡಿಂಗ್ ಆಫೀಸರ್, ಇತಿಹಾಸ ಸೃಷ್ಟಿಸಿದ ಶಾಲಿಜಾ ಧಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರನ್ನು ವಾಯುಪಡೆಯ ಕ್ಷಿಪಣಿಗಳ ಘಟಕದ ಕಮಾಂಡಿಗ್ ಆಫೀಸರ್ ಆಗಿ ನೇಮಕ ಮಾಡಲಾಗಿದೆ.

ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಶಾಲಿಜಾ ಪಾತ್ರರಾಗಿದ್ದಾರೆ. ಭಾರತೀಯ ವಾಯುಪಡೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯುದ್ಧ ಘಟಕದ ನೇತೃತ್ವವನ್ನು ಮಹಿಳಾ ಅಧಿಕಾರಿಯೊಬ್ಬರಿಗೆ ವಹಿಸಲಾಗಿದೆ.

ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ, ಮೈನಸ್ 4 ರಷ್ಟು ಉಷ್ಣಾಂಶ ಇರುವ ಸಿಯಾಚಿನ್‌ಗೆ ಇತ್ತೀಚೆಗೆ ಕ್ಯಾಪ್ಟನ್ ಸೇನಾಪಡೆಯ ಶಿವಾ ಚೌಹಾಣ್ ಅವರನ್ನು ನಿಯೋಜಿಸಲಾಗಿತ್ತು. ಅದರ ಬೆನ್ನಲ್ಲೇ ಮತ್ತೋರ್ವ ಮಹಿಳೆಗೆ ಅತ್ಯಂತ ಉನ್ನತ ಹುದ್ದೆಯನ್ನು ನೀಡಲಾಗಿದೆ.

ಗ್ರೂಪ್ ಕ್ಯಾಪ್ಟನ್ ಧಾಮಿ ಅವರನ್ನು 2003ರಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಪೈಲಟ್ ಆಗಿ ನೇಮಕ ಮಾಡಲಾಗಿತ್ತು. 2019 ರಲ್ಲಿ ಇವರಿಗೆ ಫ್ಲೈಟ್ ಕಮಾಂಡರ್ ಆಗಿ ಪ್ರಮೋಷನ್ ನೀಡಲಾಗಿತ್ತು. ಈ ಮೂಲಕ ವಾಯುಪಡೆಯ ಮೊದಲ ಮಹಿಳಾ ಅಧಿಕಾರಿ ಎನ್ನುವ ಹಿರಿಮೆಗೆ ಧಾಮಿ ಪಾತ್ರರಾಗಿದ್ದರು. ತಮ್ಮ 15 ವರ್ಷಗಳ ಸೇವೆಯಲ್ಲಿ ಇವರು ಸುಮಾರು 2,800 ಗಂಟೆಗಳ ಕಾಲ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!