ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

WTC Final: ಶಮಿ-ಇಶಾಂತ್ ಬೌಲಿಂಗ್ ದಾಳಿಗೆ ಮಂಕಾದ ನ್ಯೂಜಿಲ್ಯಾಂಡ್: 249 ರನ್​ಗಳಿಗೆ ಆಲೌಟ್, ಅಲ್ಪ ರನ್​ಗಳ ಮುನ್ನಡೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿಲ್ಯಾಂಡ್ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 249 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ 32 ರನ್​ಗಳ ಅಲ್ಪ ಮುನ್ನಡೆ ಸಾಧಿಸುವಲ್ಲಿ ಸಫಲವಾಗಿದೆ.
101 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡಿದ್ದ ಕಿವೀಸ್​ ಇಂದು ಬ್ಯಾಟಿಂಗ್ ಮುಂದುವರಿಸಿತು.   ರಾಸ್​ ಟೇಲರ್​ 11 ರನ್​ಗಳಿಸಿ ಶಮಿ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಹೆನ್ರಿ ನಿಕೋಲ್ಸ್​ 7, ಬಿಜೆ ವಾಟ್ಲಿಂಗ್ 1 ಗ್ರ್ಯಾಂಡ್​ಹೋಮ್​ 13 ರನ್​ಗಳಿಸಿ ಔಟಾದರು.
162ಕ್ಕೆ 6 ವಿಕೆಟ್​ ಕಳೆದುಕೊಂಡು 200 ಗಡಿ ದಾಟುವುದು ಅನುಮಾನ ಎನ್ನುವ ಸಂದರ್ಭದಲ್ಲಿ ನಾಯಕ ವಿಲಿಯಮ್ಸನ್​ ಜೊತೆಗೂಡಿದ ಜೆಮೀಸನ್(21)​ 30 ರನ್​ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಈ ವೇಳೆ 49 ರನ್​ಗಳಿಸಿದ್ದ ಕೇನ್​ ವಿಲಿಯಮ್ಸನ್​ ಔಟಾದರು.
ಅಂತಿಮವಾಗಿ ಟಿಮ್ ಸೌಥಿ 46 ಎಸೆತಗಳಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಸಹಿತ 30 ರನ್​ಗಳಿಸಿ 32 ರನ್​ಗಳ ಮುನ್ನಡೆಗೆ ನೆರವಾದರು.
ಭಾರತದ ಪರ ಇಶಾಂತ್ ಶರ್ಮಾ 48ಕ್ಕೆ3 , ಮೊಹಮ್ಮದ್ ಶಮಿ 76ಕ್ಕೆ4, ಅಶ್ವಿನ್​ 28ಕ್ಕೆ 2 ಮತ್ತು ಜಡೇಜಾ 20ಕ್ಕೆ 1 ವಿಕೆಟ್​ ಪಡೆದು ಮಿಂಚಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss