ಟಿ 20 ವಿಶ್ವಕಪ್​ಗೆ ಬುಮ್ರಾ ಬದಲಿಗೆ ಶಮಿ?: ರಾಹುಲ್​ ದ್ರಾವಿಡ್​ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕೊರೋನಾದಿಂದ ಗುಣಮುಖರಾಗಿ ಫಿಟ್​ನೆಸ್​ ಸಾಬೀತಾದರೆ ಮೊಹಮ್ಮದ್ ಶಮಿ ಅವರನ್ನು ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಲಾಗುವುದು ಎಂದು ಭಾರತದ ಕೋಚ್​ ರಾಹುಲ್​ ದ್ರಾವಿಡ್​ ಹೇಳಿದ್ದಾರೆ.

ದೀಪಕ್​ ಚಹಾರ್​ ಜೊತೆಗೆ ಮೊಹಮ್ಮದ್ ಶಮಿ ವಿಶ್ವಕಪ್​ ತಂಡದ ಮೀಸಲು ಆಟಗಾರರ ಪಟ್ಟಿಯಲ್ಲಿ ಇದ್ದಾರೆ. ಬುಮ್ರಾ ಬದಲಿ ಯಾರನ್ನು ಆಡಿಸಬೇಕು ಎಂಬುದಕ್ಕೆ ಅಕ್ಟೋಬರ್​ 15ರ ವರೆಗೂ ಅವಕಾಶ ಇದೆ. ಆದರೆ ಶಮಿ ಕೋವಿಡ್​ಗೆ ಒಳಗಾದ ಕಾರಣ ಎನ್​ಸಿಎ ನೀಡುವ ವರದಿಯನ್ನು ಆಧರಿಸಿ ಆಯ್ಕೆ ಕಾಯ್ದಿರಿಸಲಾಗಿದೆ.

ಬುಮ್ರಾ ಅನುಪಸ್ಥಿತಿಯಲ್ಲಿ ಭಾರತಕ್ಕೆ ಉತ್ತಮ ವೇಗಿಯ ಅಗತ್ಯತೆ ಇದೆ. ಹೋಮ್​ ಸೀರೀಸ್​ನಲ್ಲಿ ಡೆತ್​ ಓವರ್​ಗಳಲ್ಲಿ ನಿಯಂತ್ರಣ ಸಾಧಿಸುವಲ್ಲಿ ಭಾರತೀಯ ಬೌಲರ್​ಗಳು ವಿಫಲರಾಗಿದ್ದಾರೆ. ಹೀಗಾಗಿ ಅನುಭವಿ ಮತ್ತು ಡೆತ್​ ಓವರ್​ಗಳಲ್ಲಿ ನಿಯಂತ್ರಣ ಸಾಧಿಸುವ ಬೌಲರ್​ಗಳ ಅವಶ್ಯಕತೆ ಇದೆ.

ಭಾರತ ತಂಡ ನಾಳೆ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ. ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್​ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಆಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!