Saturday, April 1, 2023

Latest Posts

ಆಸ್ಟ್ರೇಲಿಯಾ ತಲುಪಿದ ಲೆಜೆಂಡರಿ ಕ್ರಿಕೆಟಿಗ ಶೇನ್‌ ವಾರ್ನ್‌ ಪಾರ್ಥೀವ ಶರೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಸ್ಟ್ರೇಲಿಯಾ ಕ್ರಿಕೆಟ್‌ ನ ಲೆಜೆಂಡರಿ ಸ್ಪಿನ್ನರ್‌ ಶೇನ್‌ ವಾರ್ನ್‌ ಅವರ ಪಾರ್ಥೀವ ಶರೀರ ಬ್ಯಾಂಕಾಕ್‌ ನಿಂದ ಖಾಸಗಿ ಜೆಟ್‌ ಮೂಲಕ ಮೆಲ್ಬೋರ್ನ್‌ ಗೆ ತರಲಾಯಿತು.
ಶೇನ್‌ ವಾರ್ನ್‌ ಅವರ ಪಾರ್ಥೀವ ಶರೀರವನ್ನು ಶವಪೆಟ್ಟಿಗೆಯಲ್ಲಿ ತರಲಾಗಿದ್ದು, ಮಾ.30ರಂದು ಅಂತ್ಯಕ್ರಿಯೆ ನಡೆಯಲಿದೆ.
ಸಕಲ ಸರ್ಕಾರಿ ಗೌರವಗಳೊಂದಿಗೆ ಮಾ.30ರಂದು ಮೆಲ್ಬೋರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Shane Warne body arrives at airport for flight back to Australiaಥಾಯ್ಲೆಂಡ್‌ ನಲ್ಲಿನ ಕೋಹ್‌ ಸಮುಯಿ ದ್ವೀಪದ ತಮ್ಮ ವಿಲ್ಲಾದಲ್ಲಿ ಶೇರ್‌ ವಾರ್ನ್‌ ಹೃದಯಾಘಾತದಿಂದ ನಿಧನರಾಗಿದ್ದರು.
ವಾರ್ನ್ 1994 ರಲ್ಲಿ ಆಶಸ್ ಹ್ಯಾಟ್ರಿಕ್ ಮತ್ತು 2006 ರಲ್ಲಿ ಬಾಕ್ಸಿಂಗ್ ದಿನದಂದು 700 ನೇ ಟೆಸ್ಟ್ ವಿಕೆಟ್ ಪಡೆದಿದ್ದರು. ಹೀಗಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೂ ವಾರ್ನ್​ ಅವರ ವೃತ್ತಿ ಬದುಕಿಗೂ ಹೆಚ್ಚಿನ ಸಂಬಂಧ ಇರುವುದರಿಂದ ಅಲ್ಲೇ ಎಲ್ಲಾ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!