Sunday, August 14, 2022

Latest Posts

ವಿಜಯ್ ದೇವರಕೊಂಡ ನಟನೆಯ ‘ಲೈಗರ್‌’ನಲ್ಲಿ ಹಾಡಲು ಷಣ್ಮುಖಪ್ರಿಯಾಗೆ ಅವಕಾಶ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ತೆಲುಗು ನಟ ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ಚಿತ್ರ ‘ಲೈಗರ್‌’ನಲ್ಲಿ ಹೊಸ ಪ್ರತಿಭೆಯೊಬ್ಬರಿಗೆ ವಿಜಯ್ ಹಾಡುವ ಅವಕಾಶ ನೀಡಿದ್ದಾರೆ.
ಆಕೆ ಬೇರಾರು ಅಲ್ಲ, ಇಂಡಿಯನ್ ಐಡಲ್ ಖ್ಯಾತಿಯ ಷಣ್ಮುಖಪ್ರಿಯಾ! ಹೌದು, ಇಂಡಿಯನ್ ಐಡಲ್‌ನಲ್ಲಿ ಷಣ್ಮುಖಪ್ರಿಯಾ ಧ್ವನಿ ಕೇಳಿದ್ದ ವಿಜಯ್ ಮುಂದೆ ನಿನಗೆ ಚಾನ್ಸ್ ಕೊಡಿಸುತ್ತೇನೆ ಎಂದು ಮಾತು ಕೊಟ್ಟಿದ್ದರು.
ಹಿಂದಿ ಶೋ ಆದರೂ ಷಣ್ಮುಖಪ್ರಿಯ ತೆಲುಗು ಮೂಲದ ಗಾಯಕಿ.
ಹೊಸ ಸಿನಿಮಾದಲ್ಲಿ ಚಾನ್ಸ್ ಕೊಡುತ್ತಿರುವ ಸುದ್ದಿ ನಿಜ ಆಗಿದೆ. ದೇವರಕೊಂಡ ಅವರ ಮನೆಗೆ ಷಣ್ಮುಖಪ್ರಿಯ ಭೇಟಿ ನೀಡಿದ್ದು, ಲೈಗರ್ ಸಿನಿಮಾದ ಒಂದು ಹಾಡನ್ನು ಇವರೇ ಹಾಡಿದ್ದಾರೆ. ಚಾನ್ಸ್ ಕೊಡುತ್ತೇವೆ ಎಂದು ಮಾತಿಗೆ ಹೇಳುತ್ತಾರೆ. ಆದರೆ ಇದು ನಿಜ ಎಂದು ನಂಬೋದಕ್ಕೆ ಆಗುತ್ತಿಲ್ಲ ಎಂದು ಷಣ್ಮುಖಪ್ರಿಯ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss