BREAKING| ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಸ್ಥಾನದಿಂದ ಶರದ್ ಪವಾರ್ ಮಂಗಳವಾರ ಕೆಳಗಿಳಿದ್ದಾರೆ.
ʻನಾನು ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದೇಬೆʼ ಎಂದು ಪವಾರ್ ಸುದ್ದಿಗೋಷ್ಟಿಯಲ್ಲಿ ಬಹಿರಂಗ ಹೇಳಿಕೆ ನೀಡಿದ್ದಾರೆ.

ಇದರಿಂದ ಮಹಾರಾಷ್ಟ್ರ ರಾಜಕೀಯದಲ್ಲಿ ವಲಯದಲ್ಲಿ ಮುಂದಾಗುವ ಬೆಳವಣಿಗೆಳತ್ತ ಎಲ್ಲರ ಚಿತ್ತ ನೆಟ್ಟಿದೆ. ಇದೀಗ ಪವಾರ್‌ ರಾಜೀನಾಮೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಹರಡುತ್ತಿರುವ ಮಾಹಿತಿಯಂತೆ ಬಿಜೆಪಿ ಸೇರ್ತಾರಾ ಪವಾರ್‌ ಕಾದು ನೋಡಬೇಕಿದೆ.

ಪವಾರ್ ಎನ್‌ಸಿಪಿ ಪಕ್ಷದ ಸಹ ಸಂಸ್ಥಾಪಕರಾಗಿದ್ದಾರೆ. 1999 ರಲ್ಲಿ, ಪವಾರ್ ಪಿಎ ಸಂಗ್ಮಾ ಮತ್ತು ತಾರಿಕ್ ಅನ್ವರ್ ಅವರು ಮಾಜಿ ಐಎನ್‌ಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗಿನ ಕೆಲವು ಹಳೆಯ ವಿವಾದದ ಮೇಲೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಹೊರಹಾಕಲ್ಪಟ್ಟ ನಂತರ ಎನ್‌ಸಿಪಿ ಪಕ್ಷವನ್ನು ರಚಿಸಿದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!