ಸೆ.26 ರಿಂದ ಅಗಲ್ಪಾಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ

ಹೊಸದಿಗಂತ ವರದಿ ಬದಿಯಡ್ಕ:

ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಆಶ್ವಯುಜ ಶುದ್ಧ ಪಾಡ್ಯದಿಂದ ನವಮಿ ತನಕ ಸೆ.26 ರಿಂದ ಅಕ್ಟೋಬರ್ 4 ರ ತನಕ ಶರನ್ನವರಾತ್ರಿ ಉತ್ಸವವು ಶ್ರೀದೇವಿಯ ವಿಶೇಷ ಆರಾಧನೆ ಮತ್ತು ಸಂತರ್ಪಣೆಯೊಂದಿಗೆ ಜರಗಲಿರುವುದು. ಈ ಸಂದರ್ಭದಲ್ಲಿ ನವರಾತ್ರಿಯ ಪಾಡ್ಯದಿಂದ ನವಮಿ ವರೆಗೆ ತುಲಾಭಾರ ಸೇವೆಯು ನಡೆಯಲಿರುವುದು.

ಸೆ.27 ರಂದು ಮಂಗಳವಾರ ಬಿದಿಗೆಯಂದು ಬೆಳಗಿನ ಪೂಜೆಯ ಬಳಿಕ `ಕದಿರೋತ್ಸವ’ ದೇವಳ ತುಂಬಿಸುವ ಕಾರ್ಯಕ್ರಮವಿರುವುದು. ಅಕ್ಟೋಬರ್ 4 ನವಮಿಯಂದು ಶ್ರೀದೇವಿಗೆ ನವಾನ್ನ, ಪಾಯಸ ಸಮರ್ಪಣೆ, ಬೆಳಗ್ಗೆ 8 ರಿಂದ 12:30ರ ತನಕ ಆಯುಧಪೂಜೆ, ಅಕ್ಟೋಬರ್ 5 ವಿಜಯದಶಮಿಯಂದು ಬೆ.8 ರಿಂದ 10:30 ರ ತನಕ ವಿದ್ಯಾರಂಭ ನಡೆಯಲಿರುವುದು. ನವರಾತ್ರಿಯಂದು ಪ್ರತೀದಿನ ಭಜನೆ, ಬೆಳಗ್ಗೆ 11 ಗಂಟೆಯಿಂದ ಲಲಿತಾ ಸಹಸ್ರನಾಮ ಪಾರಾಯಣ ನಡೆಯಲಿರುವುದು.

ಸಾಂಸ್ಕೃತಿಕ ಕಾರ್ಯಕ್ರಮಗಳು :
ಸೆ.30ರಂದು ಸಂಜೆ6 ಗಂಟೆಯಿಂದ 9 ಗಂಟೆಯ ತನಕ ರಂಗಸಿರಿ ದಸರಾ ಯಕ್ಷಪಯಣದ ಅಂಗವಾಗಿ ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇದರ ನವಾಗತ ವಿದ್ಯಾರ್ಥಿಗಳಿಂದ ಗುರುಗಳಾದ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರ ನಿರ್ದೇಶನದಲ್ಲಿ ಯಕ್ಷಗಾನ ರಂಗಪ್ರವೇಶ, ಅಕ್ಟೋಬರ್ 1ರಂದು ಬೆಳಗ್ಗೆ 10 ಗಂಟೆಯಿಂದ 12:30ರ ತನಕ ಬೇಂದ್ರೋಡು ಗೋವಿಂದ ಭಟ್ಟ ಮತ್ತು ತಂಡದವರಿಂದ ಯಕ್ಷ-ಗಾನ-ವೈಭವ, ಅ.2 ರಂದು ಬೆಳಗ್ಗೆ 10 ಗಂಟೆಯಿಂದ ಗೀತಾಜ್ಞಾನ ಯಜ್ಞದ ಪೆರ್ಲ ಮತ್ತು ಅಗಲ್ಪಾಡಿ ಘಟಕದ ಸದಸ್ಯರಿಂದ ಶ್ರೀಮದ್ಭಗವದ್ಗೀತಾ ಪಾರಾಯಣ, ಉಪ್ಪಂಗಳ ಸಹೋದರಿಯರಿಂದ ಹರಿನಾಮ ಸಂಕೀರ್ತನೆ ನಡೆಯಲಿರುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!