ಯಾವುದೇ ಏರಿಳಿತವಿಲ್ಲದೇ ಆರಂಭಗೊಂಡ ಶೇರುಪೇಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವಾಲ್ ಸ್ಟ್ರೀಟ್‌ ನಲ್ಲಿ ರಾತ್ರಿ ಮಾರಾಟದ ಕುಸಿತದ ನಡುವೆಯೇ ಶುಕ್ರವಾರ ಶೇರು ಮಾರುಕಟ್ಟೆಯು ತೀವ್ರ ಏರಿಳಿತವಿಲ್ಲದೇ ವಹಿವಾಟು ಆರಂಭಿಸಿದೆ. ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 400 ಅಂಕ ಕುಸಿದು 51,081ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 117 ಅಂಕ ಕಳೆದುಕೊಂಡು 15,240ಕ್ಕೆ ತಲುಪಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕಗಳು ತಲಾ ಒಂದು ಶೇಕಡಾ ಕುಸಿದಿವೆ.

ಟಾಪ್‌ ಲಾಸ್‌ ಮಾಡಿಕೊಂಡವರು:
ಸೆನ್ಸೆಕ್ಸ್‌ನಲ್ಲಿ, ವಿಪ್ರೋ, ಟಿಸಿಎಸ್, ಎಚ್‌ಸಿಎಲ್ ಟೆಕ್, ಟೈಟಾನ್, ಟೆಕ್ ಎಂ, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಮತ್ತು ಏಷ್ಯನ್ ಪೇಂಟ್ಸ್ ನಷ್ಟಕ್ಕೆ ಕಾರಣವಾಗಿದ್ದು, ಶೇಕಡಾ 2.6 ರಷ್ಟು ಕಡಿಮೆಯಾಗಿದೆ. ನಿಫ್ಟಿಯಲ್ಲಿ ಬ್ರಿಟಾನಿಯಾ, ಟಾಟಾ ಮೋಟಾರ್ಸ್ ಮತ್ತು ಎಚ್‌ಡಿಎಫ್‌ಸಿ ಲೈಫ್ ನಷ್ಟ ಅನುಭವಿಸಿದವು.

ಟಾಬ್‌ ಲಾಭ ಗಳಿಸಿದವರು:
ರಿಲಯನ್ಸ್, ಎನ್‌ಟಿಪಿಸಿ, ಟಾಟಾ ಸ್ಟೀಲ್, ಕೋಲ್ ಇಂಡಿಯಾ, ಬಜಾಜ್ ಆಟೋ ಮತ್ತು ಐಟಿಸಿ ಕಂಪನಿಗಳು ಎರಡು ಮಾನದಂಡದಲ್ಲಿ ಹೆಚ್ಚಿನ ಲಾಭ ದಾಖಲಿಸಿದ್ದು ಹಸಿರು ಬಣ್ಣದಲ್ಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!