ಸಿರಿವಂತರ ಮಕ್ಕಳೇಕೆ ಹೆಚ್ಚಾಗಿ ಡ್ರಗ್ಸ್ ಸೇವನೆ ಚಟಕ್ಕೆ ಬೀಳ್ತಾರೆ?

0
215

ಹೊಸದಿಗಂತ ಆನ್ಲೈನ್ ಡೆಸ್ಕ್

ಸಾಮಾಜಿಕ ಮಾಧ್ಯಮದಲ್ಲಿ ಶಾರುಖ್ ತನ್ನ ಮಗನಿಗೆ ಕೊಟ್ಟ ಸಂಸ್ಕಾರದ ಬಗ್ಗೆ ಚರ್ಚೆಗಳಾಗ್ತಿವೆ, ಪ್ರಶ್ನೆಗಳೇಳ್ತಿವೆ. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಜನರ ಮೆಚ್ಚುಗೆಗೆ ಪಾತ್ರವಾದವರು ಈಗ ಟೀಕೆ-ಟಿಪ್ಪಣಿಗಳು ಬಂದಾಗ ಅದು ಖಾಸಗಿ ವಿಷಯ ಎನ್ನಲಾಗದು.

ಅದಿರಲಿ. ಈ ಪ್ರಕರಣ ಸಾಮಾಜಿಕವಾಗಿ ನೀಡುತ್ತಿರುವ ಸಂದೇಶ ಯಾವುದು? ಶಾರುಖ್ ಅನ್ನೋ ಜನಪ್ರಿಯ ಮುಖವನ್ನು ಸ್ವಲ್ಪ ಪಕ್ಕಕ್ಕಿಟ್ಟು ಚರ್ಚೆ ಮಾಡುವುದಾದರೆ, ಯಾರದ್ದೇ ಮಕ್ಕಳು ಈ ಮಾದಕ ಸಾಮ್ರಾಜ್ಯದತ್ತ ಏಕೆ ಹೋಗ್ತಾರೆ, ಏಕೆ ಆಕರ್ಷಿತರಾಗ್ತಾರೆ ಎಂಬುದಕ್ಕೆ ಉತ್ತರವೊಂದಿದೆ. ನಮಗೆಲ್ಲ ಯಾವ ಸಂಗತಿಗಳು ಕಿಕ್ ಕೊಡುತ್ತವೋ ಅವೆಲ್ಲವನ್ನು ಅವರ ಪರಿಶ್ರಮವೇ ಇಲ್ಲದೇ ದಾಟಿದ ಪರಿಣಾಮವೇ ಅವರಿಗೆ ಕಿಕ್ ಅನ್ನೋದು ಮದ್ಯದಲ್ಲಿ, ನಶೆಯಲ್ಲಿ, ಗುಂಪು ಸೆಕ್ಸ್ ನಲ್ಲಿ  ಹುಡುಕಬೇಕಾದ ಸಂಗತಿಯಾಗುತ್ತೆ….

ನಮ್ಮೆಲ್ಲರ ಬದುಕಲ್ಲಿ ನಾವು ಬಹಳಷ್ಟು ಸಾರಿ ಯಾವುದನ್ನು ಕಷ್ಟ ಅಂತ ಅಂದುಕೊಂಡಿರುತ್ತೇವೋ ಅದು ನಮಗೆ ವಶವಾಗುವ ಹಾದಿಯಲ್ಲಿ ಒಂದಿಷ್ಟು ಕಿಕ್ ಗಳನ್ನು ಕೊಟ್ಟಿರುತ್ತೆ. ಮೊದಲ ಸಂಬಳ ಕೈಗೆ ಬಂದಿದ್ದು, ಮೊದಲ ಬಾರಿ ವಿಮಾನ ಹತ್ತಿದ್ದು, ಕಾರ್ ಕೊಂಡಿದ್ದು, ಇಎಂಐನಲ್ಲಿ ಅಪಾರ್ಟ್ಮೆಂಟ್ ತಗೊಂಡಿದ್ದು ಇವೆಲ್ಲ ಒಂದು ಹಂತದಲ್ಲಿ ಒದ್ದಾಟ ಅನ್ನಿಸಿದ್ರೂ ಅವೇ ನಿಮ್ಮೆಲ್ಲರ ಬದುಕನ್ನು ಎಂಗೇಜ್ ಆಗಿ ಇರಿಸಿದ್ದು, ನಿಮಗೆ ಕಿಕ್ ಕೊಟ್ಟಿದ್ದು…

ಇವೆಲ್ಲದರಿಂದ ಆಚೆಗೆ ಬೆಳೆಯುತ್ತಿರುವ ಮೇಲ್ಮಧ್ಯಮವರ್ಗದ ಹುಡುಗ-ಹುಡುಗಿಯರಿಗೆ ಬದುಕಿನ ಉದ್ದೇಶ ವಿವರಿಸುವ ಘನವಾದ ದೃಷ್ಟಿ ಮತ್ತು ಗುರಿಗಳನ್ನು ನೀಡದಿದ್ದರೆ, ಶಾರುಖ್ ಮಗ ಆರ್ಯನ್ ರೀತಿಯೇ ಅನೇಕ ಯುವಕರು ತಲೆನೋವಾದಾರು!

LEAVE A REPLY

Please enter your comment!
Please enter your name here