Monday, July 4, 2022

Latest Posts

ಅಪಘಾತಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಸಚಿವೆ ಶಶಿಕಲಾ ಜೊಲ್ಲೆ

ಹೊಸದಿಗಂತ ವರದಿ, ವಿಜಯಪುರ:

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಿಂದಗಿಗೆ ತೆರಳುತ್ತಿದ್ದ ಮಾರ್ಗಮಧ್ಯೆದ ಮುನಿಶ್ವರ ಭಾಗ ಬಳಿ, ಅಪಘಾತಗೊಂಡಿದ್ದ ಬೈಕ್ ಸವಾರನನ್ನು ಆ್ಯಂಬುಲೆನ್ಸ್ ಕರೆಯಿಸಿ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಿಂದಗಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಹಿನ್ನೆಲೆಯ ಕಾರ್ಯಕ್ರಮಕ್ಕೆ ಸಚಿವೆ ಶಶಿಕಲಾ ಜೊಲ್ಲೆ ತೆರಳುತ್ತಿದ್ದಾಗ, ಅಪಘಾತಗೊಂಡು ಬಿದ್ದಿರುವ ಬೈಕ್ ಸವಾರನನ್ನು ಕಂಡು, ವಾಹನ ನಿಲ್ಲಿಸಿ, ಗಾಯಗೊಂಡ ಸವಾರನಿಗೆ ಧೈರ್ಯ ತುಂಬಿ, ಆರೋಗ್ಯಾಧಿಕಾರಿಗಳಿಗೆ ಕರೆ ಮಾಡಿ, ತಕ್ಷಣ ಆ್ಯಂಬುಲೆನ್ಸ್ ಕರೆಸಿ, ಆಸ್ಪತ್ರೆಗೆ ಸಾಗಿಸಿದ್ದಾರೆ.

ಈ ಸಂದರ್ಭ ಕೃಷ್ಣಾ ಗುನ್ಹಾಳಕರ, ಶಿವರುದ್ರ ಬಾಗಲಕೋಟ, ಆದಿತ್ಯ ತಾವರಗೇರಿ ಗಾಯಗೊಂಡ ಬೈಕ್ ಸವಾರನಿಗೆ ನೆರವಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss