Monday, August 8, 2022

Latest Posts

ಮದುವೆಯಾಗುತ್ತೇನೆಂದು ನಂಬಿಸಿ ಹುಡುಗರ ಬಳಿ ಹಣ,ಚಿನ್ನ ದೋಚುತ್ತಿದ್ದ ಯುವತಿ ಬಂಧನ

ದಿಗಂತ ವರದಿ ಮೈಸೂರು:

ಮದುವೆಯಾಗುವುದಾಗಿ ನಂಬಿಸಿ ಯುವಕರ ಬಳಿ ಲಕ್ಷಾಂತರ ರೂ ಹಣ, ಚಿನ್ನಾಭರಣ ಪಡೆದು ವಂಚಿಸುತ್ತಿದ್ದ ಖತರ್ನಾಕ್ ಕಳ್ಳಿಯನ್ನ ಮೈಸೂರಿನ ಮೇಟಗಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೆAಗಳೂರಿನ ಅಂದರಹಳ್ಳಿ ಎರಡನೇ ಮುಖ್ಯ ರಸ್ತೆಯಲ್ಲಿ ವಾಸವಾಗಿರುವ ಮೇಘ (25) ಎಂಬಾಕೆಯೇ ಬಂಧಿತ ಖತರ್‌ನಾಕ್ ವಂಚಕಿ. ಈಕೆ ಓದಿರೋದು 10ನೇ ಕ್ಲಾಸ್, ಆದರೆ ಯುವಕರನ್ನು ಹಾಗೂ ಅವರ ಮನೆಯವರನ್ನು ಯಾಮಾರಿಸೋದರಲ್ಲಿ ಕಳ್ಳರಿಗಿಂತ ಚಾಲಾಕಿ.
ಫೇಸ್‌ಬುಕ್‌ನಲ್ಲಿ ಚಿನ್ನುಗೌಡ ಎಂಬ ಹೆಸರಿನಲ್ಲಿ ಪ್ರೊಫೈಲ್ ಸೃಷ್ಟಿಸಿರುವ ಈಕೆ, ರವಿ ಎಂಬಾತನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾಳೆ. ರಿಕ್ವೆಸ್ಟ್ ಅಕ್ಸೆಪ್ಟ್ ಆಗಿ ಇಬ್ಬರೂ ನಂಬರ್ ಪರಸ್ಪರ ಹಂಚಿಕೊAಡಿದ್ದಾರೆ. ನಂತರ ತನ್ನ ಹೆಸರು ಬಿಂದು ಗೌಡ ಎಂದು ಸುಂದರವಾದ ಹುಡುಗಿಯರ ಫೋಟೋಗಳನ್ನು ತನ್ನದೇ ಫೋಟೊ ಎಂದು ಪರಿಚಯಿಸಿಕೊಂಡಿದ್ದಾಳೆ.
ನನ್ನ ತಂದೆ ಶ್ರೀಮಂತ. ಮೈಸೂರಿನ ವಿಜಯನಗರದಲ್ಲಿ 2 ಪೆಟ್ರೋಲ್ ಬಂಕ್, ಬಾರ್ ಇಟ್ಟಿದ್ದಾರೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದು, ಮದುವೆಯಾಗಬೇಕು ಎಂಬ ಆಸೆ ಇದೆ. ನಿನ್ನ ಹುಟ್ಟು ಹಬ್ಬಕ್ಕೆ 45 ಲಕ್ಷ ರೂ. ಮೌಲ್ಯದ ಫಾರ್ಚುನರ್ ಕಾರು ಕೊಡಿಸುತ್ತೇನೆ. ಅದನ್ನು ಕೊಂಡುಕೊಳ್ಳಲು 1 ಲಕ್ಷ ರೂ. ಹಣ ಕಡಿಮೆ ಇದೆ. ಅದನ್ನು ನನ್ನ ಸ್ನೇಹಿತನ ಕೈಗೆ ನೀನು ಕೊಟ್ಟು ಕಳುಹಿಸು ಎಂದು ನಂಬಿಸಿದ್ದಾಳೆ.
ನAತರ ಯುವಕನ ತಾಯಿಯನ್ನು ಪರಿಚಯ ಮಾಡಿಕೊಂಡು ಅವರ ಕತ್ತಿನಲ್ಲಿದ್ದ ಸರ ತುಂಬಾ ಇಷ್ಟಾ ಆಗಿದೆ ಎಂದು ಹೇಳಿದ್ದಾಳೆ. ನಿಮ್ಮ ಮನೆಯಲ್ಲಿರುವ ಆಭರಣಗಳನ್ನು ನನ್ನ ಸ್ನೇಹಿತನಿಗೆ ಕೊಟ್ಟು ಕಳುಹಿಸಿ. ಅದೇ ರೀತಿಯ ಡಿಸೈನ್ ಒಡವೆಗಳನ್ನು ಮಾಡಿಸಿಕೊಂಡು ನಿಮ್ಮ ಒಡವೆಗಳನ್ನು ವಾಪಸ್ ಕೊಡುತ್ತೇನೆಂದು ನಂಬಿಸಿ ಯಾಮಾರಿಸಿದ್ದಾಳೆ.
ಸುಮಾರು 450 ಗ್ರಾಂ ಒಡವೆಗಳನ್ನು ಪಡೆದು ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾಳೆ. ಈ ಸಂಬAಧ ಯುವಕ ಮೇಟಗಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ನಂತರ ಪೊಲೀಸರು ಆರೋಪಿ ಬಿಂದುಗೌಡಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವಾರು ಯುವಕರನ್ನು ಇದೇ ರೀತಿ ಯಾಮಾರಿಸಿ ಲಕ್ಷಾಂತರ ಹಣ ಲಪಟಾಯಿಸಿರುವುದು ಬೆಳೆಕಿಗೆ ಬಂದಿದೆ.
2018ನೇ ಸಾಲಿನಲ್ಲಿ ಯೋಗಾನಂದ ಎಂಬ ಯುವಕನಿಗೂ 15 ಲಕ್ಷ ರೂ. ವಂಚಿಸಿದ್ದಾಳೆ. ಅಲ್ಲದೇ, ಶ್ರೀನಿವಾಸ್ ಎಂಬಾತನಿAದ 9.70 ಲಕ್ಷ ರೂ. ವಂಚಿಸಿದ್ದಾಳೆ.
ಮೈಸೂರು, ಮಂಡ್ಯ, ಬೆಂಗಳೂರಿನಲ್ಲಿ ವಂಚನೆ ಎಸಗಿದ್ದಾಳೆ ಎನ್ನಲಾಗಿದೆ. ಪ್ರತಿ ಬಾರಿ ಅಪರಾಧ ಮಾಡುವಾಗ ಮದ್ಯವರ್ತಿಗಳನ್ನಾಗಿ ಹೊಸಬರನ್ನೇ ಬಳಸಿಕೊಂಡು, ತನ್ನ ಕೆಲಸ ಮುಗಿದ ನಂತರ ತನ್ನ ದೂರವಾಣಿ ಸಂಖ್ಯೆಯನ್ನು ಬದಲಾಯಿಸಿ ಅವರುಗಳ ಸಂಪರ್ಕ ಕಡಿತಗೊಳಿಸುತ್ತಿದ್ದಳು.
ವಂಚನೆ ಜಾಲದ ಬಗ್ಗೆ ಪೊಲೀಸರು ಸಮಗ್ರ ತನಿಖೆ ಮುಂದುವರಿಸಿದ್ದಾರೆ. ಡಿ.ಸಿ.ಪಿ ಡಾ. ಎ.ಎನ್. ಪ್ರಕಾಶ್ ಗೌಡ, ನರಸಿಂಹರಾಜ ವಿಭಾಗದ ಎ.ಸಿ.ಪಿ ಶಿವಶಂಕರ್ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಠಾಣೆಯ ಇನ್ಸ್ಪೆಕ್ಟರ್ ಮಲ್ಲೇಶ್ ರಿಂದ ಈ ಪತ್ತೆ ಕಾರ್ಯ ನಡೆದಿದ್ದು, ಈಕೆಯಿಂದ ವಂಚನೆಗೊಳದಾವರು ಯಾರದರೂ ಇದ್ದರೆ, ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss