ಶೀಘ್ರದಲ್ಲೇ ಪಾಕ್‌ ನೂತನ ಸೇನಾ ಮುಖ್ಯಸ್ಥರ ನೇಮಕ: ಪಾಕ್‌ ಪ್ರಧಾನಿ ಚೀನಾಕ್ಕೆ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನ ಸೇನೆಗೆ ಹೊಸ ಮುಖ್ಯಸ್ಥರ ನೇಮಕ ಆಗಲಿದೆ. ಪ್ರಧಾನಿ ಶೆಹಬಾಜ್ ಷರೀಫ್ ಅವರು ನವೆಂಬರ್‌ನಲ್ಲಿ ಹೊಸ ಸೇನಾ ಮುಖ್ಯಸ್ಥರನ್ನು ನೇಮಿಸಲಿದ್ದಾರೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೇಲಾಗಿ ಇದೇ ತಿಂಗಳ(ನವೆಂಬರ್) ಮೊದಲ ವಾರದಲ್ಲಿ ಚೀನಾಕ್ಕೆ ಭೇಟಿ ನೀಡುವುದಾಗಿ ಹೇಳಿದರು. ಶಾಂಘೈ ಸಹಕಾರ ಸಂಘಟನೆಯ ಸಮಾವೇಶದಲ್ಲಿ ಭಾಗಿಯಾದ ವೇಳೆ ಜಿನ್ ಪಿಂಗ್ ಶೆಹಬಾಜ್ ಅವರನ್ನು ಚೀನಾಕ್ಕೆ ಆಹ್ವಾನಿಸಿದ್ದರು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಶೆಹಬಾಜ್ ಡ್ರ್ಯಾಗನ್ ದೇಶಕ್ಕೆ ಭೇಟಿ ನೀಡಲಿದ್ದಾರೆ. ಜೊತೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡಾ ಈ ಸಂದರ್ಭದಲ್ಲಿ ಶೆಹಬಾಜ್ ಅವರಿಗೆ ಆಹ್ವಾನಿಸಿದ್ದು, ಶೆಹಬಾಜ್ ರಷ್ಯಾಕ್ಕೂ ಹೋಗುವ ಸಾಧ್ಯತೆ ಇದೆ ಎಂದು ಪಾಕ್‌ ಸಚಿವ ತಿಳಿಸಿದರು. ಪಾಕಿಸ್ತಾನಕ್ಕೆ ಗೋಧಿ ಮತ್ತು ಅನಿಲ ರಫ್ತು ಮಾಡಲು ರಷ್ಯಾ ಬಯಸಿದೆ ಎಂದರು.

ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಅವರ ಅಧಿಕಾರಾವಧಿ ಮೂರು ವರ್ಷಗಳ ಹಿಂದೆ ಪೂರ್ಣಗೊಂಡಿತ್ತು. ಅವರನ್ನು ನವೆಂಬರ್ 2022 ರವರೆಗೆ ಸೇನಾ ಮುಖ್ಯಸ್ಥರನ್ನಾಗಿ ವಿಸ್ತರಿಸಲಾಗಿತ್ತು ಎಂದರು. ಈ ಸಮಯದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನ ಸೇನೆಯ ಹೊಸ ಮುಖ್ಯಸ್ಥರ ನೇಮಕಾತಿಯನ್ನು ಬಗ್ಗೆ ವಿವಾದ ಎಬ್ಬಿಸಿದ್ದಾರೆಂದು ಖವಾಜಾ ಮುಹಮ್ಮದ್ ಆಸಿಫ್ ಟೀಕಿಸಿದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!