ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾರ ನಿಧನದ ನಂತರ ಶೆಹನಾಜ್ ಗಿಲ್ ಸಾಮಾಜಿಕ ಜಾಲತಾಣದಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು.
ಇದೀಗ ಶೆಹ್ನಾಜ್ ಸಾಮಾಜಿಕ ತಾಲತಾಣಕ್ಕೆ ಕಂ ಬ್ಯಾಕ್ ಮಾಡಿದ್ದು, ಸಿದ್ಧಾರ್ಥ್ ಶುಕ್ಲಾ ಕುರಿತಾದ ಪೋಸ್ಟ್ ಮಾಡಿದ್ದಾರೆ.
ಅಗಲಿದ ಗೆಳೆಯನಿಗಾಗಿ ಹೃದಯಪೂರ್ವಕ ನಮನ ಸಲ್ಲಿಸಿದ್ದು, ‘ತು ಯಹೀ ಹೇ’ ಹಾಡಿನ ಪೋಸ್ಟರ್ನ್ನು ರಿಲೀಸ್ ಮಾಡಿದ್ದಾರೆ. ಹಾಗೂ ಇದಕ್ಕೆ ‘ನೀನು ನನ್ನವನು…’ ಎಂಬ ಕ್ಯಾಪ್ಷನ್ ಕೂಡ ಹಾಕಿದ್ದಾರೆ. ಪೋಸ್ಟರ್ನಲ್ಲಿ ಸಿದ್ಧಾರ್ಥ್ ಹಾಗೂ ಶೆಹ್ನಾಜ್ ಮನತುಂಬಿ ನಕ್ಕಿದ್ದಾರೆ. ನಗು ತುಂಬಾನೇ ನೈಸರ್ಗಿಕವಾಗಿದೆ.
ಶೆಹ್ನಾಜ್ ಹಾಗೂ ಸಿದ್ಧಾರ್ಥ್ ತುಂಬಾನೇ ಆತ್ಮೀಯರಾಗಿದ್ದರು. ಸಿದ್ಧಾರ್ಥ್ ಕೊನೆಘಳಿಗೆಯಲ್ಲಿಯೂ ಕೂಡ ಶೆಹ್ನಾಜ್ ಜೊತೆಗೇ ಇದ್ದರು. ಸಿದ್ಧಾರ್ಥ್ ಸಾವಿನ ನೋವಿನಿಂದ ಇನ್ನೂ ಹೊರಬಾರದ ಶೆಹ್ನಾಜ್ ಈಗಲೂ ಸಿದ್ಧಾರ್ಥ್ ಬಗ್ಗೆ ಅಷ್ಟೇ ಪ್ರೀತಿ ಉಳಿಸಿಕೊಂಡಿದ್ದಾರೆ.