Sunday, August 14, 2022

Latest Posts

ಮಕ್ಕಳೊಂದಿಗೆ ವೀಕೆಂಡ್​ ಮಸ್ತಿಯಲ್ಲಿ ಶಿಲ್ಪಾ ಶೆಟ್ಟಿ: ರಾಜ್ ಕುಂದ್ರಾ ಎಲ್ಲಿ ಎಂದ ಅಭಿಮಾನಿಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ ಕುಂದ್ರಾ ಬಿಡುಗಡೆಯ ನಂತರ ಎಲ್ಲಿಯೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಕುಟುಂಬದವರ ಜೊತೆ ಕಾಣಿಸಿಕೊಂಡಿಲ್ಲ. ಆದರೆ ಈ ವೀಕೆಂಡ್​ನಲ್ಲಿ ಶಿಲ್ಪಾ ತಮ್ಮ  ಮಕ್ಕಳಾದ ವಿಯಾನ್, ಸಮಿಷಾಗೆ ಹಾಗೂ ತಾಯಿ ಸುನಂದಾ ಶೆಟ್ಟಿ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ರಾಜ್ ಕುಂದ್ರಾ ಇರಲಿಲ್ಲ.

ಈ ನಾಲ್ವರು ವೀಕೆಂಡ್ ಮಸ್ತಿಗಾಗಿ ಆಲಿಬಾಗ್​ಗೆ ತೆರಳಿದ್ದಾರೆ.ಈ ವೇಳೆ ನೆರೆದಿದ್ದ ಛಾಯಾಗ್ರಾಹಕರಿಗೆ ನಗುಮೊಗದಿಂದಲೇ ಪೋಸ್ ನೀಡಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಅಭಿಮಾನಿಗಳು ರಾಜ್ ಕುಂದ್ರಾ ಎಲ್ಲಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದಾರೆ.  ಇತ್ತೀಚೆಗೆ ಶಿಲ್ಪಾ ಶೆಟ್ಟಿ ಹಂಚಿಕೊಂಡ ಹಬ್ಬಗಳ ಆಚರಣೆಯ ಚಿತ್ರಗಳಲ್ಲೂ ರಾಜ್ ಕುಂದ್ರಾ ಇರಲಿಲ್ಲ. ಉದ್ದೇಶಪೂರ್ವಕವಾಗಿ ಅವರು ಸುದ್ದಿಯಾಗುವುದರಿಂದ ದೂರವಿದ್ದಾರೋ ಅಥವಾ ಬೇರೇನಾದರೂ ಕಾರಣವಿದೆಯೋ ಎಂಬುದು ಅಭಿಮಾನಿಗಳಿಗೆ ಇನ್ನೂ ಸ್ಪಷ್ಟವಾಗಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss