Tuesday, July 5, 2022

Latest Posts

ಪತಿ ರಾಜ್ ಕುಂದ್ರಾಗೆ ವಿಚ್ಛೇದನ ನೀಡ್ತಾರಾ ಶಿಲ್ಪಾ ಶೆಟ್ಟಿ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಪತಿ ರಾಜ್ ಕುಂದ್ರಾ ಬಂಧನಕ್ಕೊಳಗಾದ ಬಳಿಕ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ತಮ್ಮ ಜೀವನದಲ್ಲಿ ಬಹುದೊಡ್ಡ ಬದಲಾವಣೆ ತರಲು ಹೊರಟಂತೆ ಕಾಣುತ್ತದೆ.
ಮಕ್ಕಳ ಭವಿಷ್ಯದ ಚಿಂತೆ ಶಿಲ್ಪಾಗೆ ಕಾಡುತ್ತಿದ್ದು, ಈ ಕಾರಣಕ್ಕೆ ಪತಿಯಿಂದ ಬೇರೆ ಆಗಲು ಅವರು ಚಿಂತನೆ ನಡೆಸಿದ್ದಾರೆ ಎನ್ನುವ ವರದಿ ಬಿತ್ತರವಾಗಿದೆ.
ಕಳೆದ ತಿಂಗಳು ವಿಚಾರಣೆ ವೇಳೆ ಆ ಮೊಬೈಲ್ ಆ್ಯಪ್​ಗೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಪತಿ ನಿರಪರಾಧಿ, ಈ ದಂಧೆಯಲ್ಲಿ ಅವರು ಭಾಗಿಯಾಗಿಲ್ಲ ಎಂದು ಮುಂಬೈ ಕ್ರೈಂ ಬ್ರಾಂಚ್ ಬಳಿ ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ರು.ಆದರೆ, ಈಗ ಕುಂದ್ರಾರ ಒಂದು ಪೈಸೆಯನ್ನೂ ಮುಟ್ಟದೇ ಇರಲು ನಿರ್ಧರಿಸಿದ್ದಾರೆ.
ಮಗ ವಿಯಾನ್ ರಾಜ್ ಕುಂದ್ರಾ ಮತ್ತು ಮಗಳು ಶಮೀಶಾ ಕುಂದ್ರಾ ಜೊತೆ ಇರಲು ಸುರಕ್ಷಿತ ವಾತಾವರಣ ಕಂಡುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ರಾಜ್​ ಕುಂದ್ರಾ ಸದ್ಯ ಜೈಲಿನಲ್ಲಿದ್ದಾರೆ. ಅವರು ಎಲ್ಲಾ ರೀತಿಯ ಪ್ರಯತ್ನ ನಡೆಸಿದರೂ ಜಾಮೀನು ಸಿಗುತ್ತಿಲ್ಲ. ಎಲ್ಲಾ ಸಾಕ್ಷ್ಯಗಳು ಅವರ ವಿರುದ್ಧವಾಗಿಯೇ ಇವೆ. ಇನ್ನು ಸಾಕ್ಷ್ಯ ನಾಶದ ಭಯ ಕೂಡ ಕಾಡುತ್ತಿದೆ. ಈ ಎಲ್ಲಾ ಕಾರಣಕ್ಕೆ ಅವರಿಗೆ ಬೇಲ್​ ಸಿಗುತ್ತಿಲ್ಲ. ಅವರು ಜೈಲಿನಿಂದ ಹೊರ ಬಂದ ಕೂಡಲೇ ಶಿಲ್ಪಾ ವಿಚ್ಛೇದನ ವಿಚಾರ ಮಾತನಾಡಲಿದ್ದಾರೆ ಎನ್ನಲಾಗಿದೆ.
ಇನ್ನು 14 ವರ್ಷಗಳ ಬಳಿಕ ಹಂಗಾಮ-2 ಸಿನಿಮಾದಲ್ಲಿ ನಟಿಸುವ ಮೂಲಕ ಶಿಲ್ಪಾ ಮತ್ತೆ ಚಿತ್ರರಂಗಕ್ಕೆ ಮರಳಿದ್ದರು. ಆದ್ರೆ, ಚಿತ್ರ ಬಿಡುಗಡೆಗೆ ಕೆಲ ದಿನಗಳಿರುವಾಗಲೇ ಪತಿಯನ್ನು ಬಂಧಿಸಲಾಗಿತ್ತು. ಇವರ ನಟನೆಯ ‘ನಿಕಮ್ಮಾ’ ಸಿನಿಮಾ ಬಿಡುಗಡೆಯಾಗಬೇಕಿದೆ. ಹಂಗಾಮ-2 ಮತ್ತು ನಿಕಮ್ಮಾ ಬಳಿಕ ಹೆಚ್ಚಿನ ಅವಕಾಶಗಳಿಗೆ ನಟಿ ಕಾಯುತ್ತಿದ್ದಾರೆ ಎಂದು ವೆಬ್ ಪೋರ್ಟಲ್​​ವೊಂದಕ್ಕೆ ಶಿಲ್ಪಾ ಶೆಟ್ಟಿಯ ಸ್ನೇಹಿತೆ ತಿಳಿಸಿದ್ದಾರೆ.
ಲಂಡನ್ ಮೂಲದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಮೊಬೈಲ್ ಆ್ಯಪ್ ಮೂಲಕ ಅಶ್ಲೀಲ ವಿಡಿಯೋ ಸ್ಟ್ರೀಮಿಂಗ್ ಮಾಡುವ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದಡಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಮತ್ತು ರಯಾನ್ ಥಾರ್ಪೆ ಸೇರಿ 11 ಮಂದಿಯನ್ನು ಜುಲೈ 19ರಂದು ಮುಂಬೈ ಪೊಲೀಸರು ಬಂಧಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss