Wednesday, June 29, 2022

Latest Posts

ಶಿವಮೊಗ್ಗ । ನೈಋತ್ಯ ವಿಭಾಗದ ರೈಲು ಸಂಚಾರದಲ್ಲಿ ಬದಲಾವಣೆ

ಹೊಸದಿಗಂತ ವರದಿ, ಶಿವಮೊಗ್ಗ :

ನೈಋತ್ಯ ವಿಭಾಗದಲ್ಲಿ ಸಂಚರಿಸುವ ರೈಲುಗಳಲ್ಲಿ ಕೆಲವೊಂದು ಬದಲಾವಣೆ ಮಾಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಸಂಚರಿಸುವ ಎರಡು ರೈಲುಗಳಲ್ಲಿಯೂ ಬದಲಾವಣೆ ಮಾಡಲಾಗಿದೆ.
ಶಿವವೊಗ್ಗದಿಂದ ತಾಳಗುಪ್ಪಕ್ಕೆ ಹೋಗುವ ಮೈಸೂರು-ತಾಳಗುಪ್ಪ (ರೈಲು ಸಂಖ್ಯೆ 16227) ರೈಲಿಗೆ ಒಂದು ಬೋಗಿಯನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಇದು  ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್ ಆಗಿರಲಿದೆ . ಇದರಿಂದಾಗಿ ಈ ರೈಲಿನಲ್ಲಿ 19 ಬೋಗಿಗಳು ಇರಲಿವೆ. ತಾಳಗುಪ್ಪ-ಮೈಸೂರು ( ರೈಲು ಸಂಖ್ಯೆ 16228) ರೈಲಿಗೆ ಸಹ ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್ ಅಳವಡಿಸಲಾಗುತ್ತಿದೆ.
ಶಿವವೊಗ್ಗದಿಂದ ಚಿಕ್ಕಮಗಳೂರಿಗೆ ಹೋಗುತ್ತಿದ್ದ ಶಿವಮೊಗ್ಗ-ಚಿಕ್ಕಮಗಳೂರು ಟೌನ್( ರೈಲು ಸಂಖ್ಯೆ 07365) ರೈಲು ತಾತ್ಕಾಲಿಕವಾಗಿ ಬೀರೂರುವರೆಗೆ ಮಾತ್ರ ಸಂಚರಿಲಿದೆ. ಬೀರೂರಿನಿಂದ ಚಿಕ್ಕಮಗಳೂರಿನ ಸಂಚಾರವನ್ನು ಸ್ಥಗಿತೊಳಿಸಲಾಗಿದೆ. ನವೆಂಬರ್ 25 ರಿಂದ ಇದು ಜಾರಿಗೆ ಬರಲಿದೆ ಎಂದು ದಕ್ಷಿಣ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಅಧಿಕಾರಿ ಅನೀಶ್ ಹೆಗ್ಡೆ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss