Wednesday, August 17, 2022

Latest Posts

ಶಿವಮೊಗ್ಗ ಹಾಲು ಒಕ್ಕೂಟ ಅಧ್ಯಕ್ಷ ಆನಂದ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ

ಹೊಸ ದಿಗಂತ ವರದಿ, ಶಿವಮೊಗ್ಗ:

ಶಿವಮೊಗ್ಗ ಹಾಲು ಒಕ್ಕೂಟ ಅಧ್ಯಕ್ಷ ಆನಂದ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ.
ಅಧ್ಯಕ್ಷ ಆನಂದ್ ವಿರುದ್ಧ ಕಳೆದ ಕೆಲ ತಿಂಗಳ ಹಿಂದೆಯೇ 1 0 ಮಂದಿ ನಿರ್ದೇಶಕರು ಜೂನ್ 05 ರಂದು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದರು. ಆದರೆ ಆನಂದ್ ನ್ಯಾಯಾಲಯದ ಮೊರೆ ಹೋಗಿ ಅವಿಶ್ವಾಸ ಗೊತ್ತುವಳಿಗೆ ತಡೆಯಾಜ್ಞೆ ತಂದಿದ್ದರು. ಕೊರೋನ ಹಿನ್ನೆಲೆಯಲ್ಲಿ ಸಹಕಾರ ಸಂಘಗಳಲ್ಲಿ ಯಾವುದೇ ಚುನಾವಣೆ ನಡೆಸುವಂತಿಲ್ಲ ಎಂಬ ಆದೇಶವನ್ನು ಇರಿಸಿಕೊಂಡು ಆನಂದ್ ಹೈಕೋರ್ಟ್‌ನಿಂದ ತಡೆಯಾಜ್ನೆ ತಂದಿದ್ದರು.
ಲಾಕ್‌ಡೌನ್ ಸಡಿಲಿಕೆ ಆಗಿರುವುದರಿಂದ ಹೈಕೋರ್ಟ್ ತಡೆಯಾಜ್ನೆ ತೆರವು ಮಾಡಿತ್ತು. ಈ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಪರ 13 ಮತಗಳು ದೊರೆತವು. ಅಧ್ಯಕ್ಷರ ಪರವಾಗಿ ಒಂದೂ ಮತವೂ ದೊರೆಯಲಿಲ್ಲ. ಸಭೆಗೆ ಅಧ್ಯಕ್ಷ ಆನಂದ್ ಗೈರಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!