Saturday, August 13, 2022

Latest Posts

ಶಿವಮೊಗ್ಗ| ಸದಸ್ಯರ ಗೈರು ಹಾಜರಾತಿಯಿಂದ ಸಾಮಾನ್ಯಸಭೆ ಮುಂದೂಡಿಕೆ

ಹೊಸ ದಿಗಂತ ವರದಿ, ಶಿವಮೊಗ್ಗ:

ಸಾಗರದ ತಾಪಂ ಸಾಮರ್ಥ್ಯ ಸೌಧದಲ್ಲಿ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯಸಭೆ
ಸದಸ್ಯರ ಗೈರು ಹಾಜರಾತಿಯಿಂದ ಮುಂದೂಡಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಸಾಮಾನ್ಯ ಸಭೆಗೆ ಹಾಜರಾಗಿ ಕ್ರಿಯಾಯೋಜನೆ ಮಾಡಲು ಸಹಕಾರ ನೀಡುವಂತೆ ಎಲ್ಲ ಸದಸ್ಯರಿಗೆ ಫೋನ್ ಮೂಲಕ ಮಾಹಿತಿ ನೀಡಲಾಗಿತ್ತು. ಬಹುತೇಕ ಸದಸ್ಯರು ಸಭೆಗೆ ಹಾಜರಾಗುವ
ಭರವಸೆ ನೀಡಿದ್ದರು. ಆದರೆ ಈ ದಿನ ಸಭೆಗೆ ಹಾಜರಾಗದೆ ಅಭಿವೃದ್ದಿ ವಿಷಯದಲ್ಲಿ ರಾಜಕಾರಣ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದರು.
ಕಳೆದ ವರ್ಷ ನಿಗಧಿತ ಸಮಯದಲ್ಲಿ ಕ್ರಿಯಾಯೋಜನೆ ಮಾಡದೆ ಇರುವುದರಿಂದ ಟ್ರಜರಿ ಲಾಕ್ ಆಗಿ ಬಂದ ಹಣ ವಾಪಾಸ್ ಹೋಗಿತ್ತು. ಅದನ್ನು ವಾಪಾಸ್ ತರಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರು ಯಾವುದೇ ಪ್ರಯತ್ನ ಮಾಡಿರಲಿಲ್ಲ. ಕೆಲವು ಸದಸ್ಯರು ವೈಯಕ್ತಿಕವಾಗಿ ನನ್ನ ಬಳಿ ನಮಗೆ ಸಭೆಗೆ ಹಾಜರಾಗಬಾರದು ಎಂದು ಬಾಹ್ಯವಾಗಿ ಭಾರೀ ಒತ್ತಡವಿದೆ. ಸಭೆಗೆ ಹಾಜರಾಗದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಯಾವ ರೀತಿ ಸದಸ್ಯರ ಮೇಲೆ ಬಾಹ್ಯ ಒತ್ತಡ ಹೇರಿದ್ದಾರೆಂದು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss