ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕನ್ನಡ ಕಿರುತೆರೆ ಧಾರವಾಹಿ ಕುಲವಧುಯಿಂದ ಮನೆಮಾತಾಗಿದ್ದ ‘ಶಿಶಿರ್ ಶಾಸ್ತ್ರಿ’ ಇದೀಗ ತೆಲುಗು ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತೆಲುಗು ಜೀ ವಾಹಿನಿಯಲ್ಲಿ ‘ಇಂಟಿಗುಟ್ಟು’ ಎಂಬ ಧಾರವಾಹಿಯ ಮೂಲಕ ತೆಲುಗು ಕಿರುತೆರೆಗೆ ಪದಾರ್ಪಣೆ ಮಾಡಲಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಲಿದ್ದಾರೆ. ಈ ಧಾರವಾಹಿಯಲ್ಲಿ ಶಿಶಿರ್ ಶೌರ್ಯ ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ದಾರವಾಹಿಯಲ್ಲಿ ಸಾಯಿ ಕಿರಣ್ ರಾಮ್, ರೂಪಾ ಶ್ರವಣ್, ನಿಶಾ ಗೌಡ, ಮೀನಾ ವಾಸು, ನಿಸರ್ಗಾ, ಐಶ್ವರ್ಯಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.
ಈ ಬಗ್ಗೆ ಇನ್ಸ್ ಟಾಗ್ರಾಂ ನಲ್ಲಿ ಹಂಚಿಕೊಳ್ಳುತ್ತಿರುವ ಶಿಶಿರ್, ತಮ್ಮ ಹೊಸ ಧಾರವಾಹಿಯ ಬಗ್ಗೆ ಪೋಸ್ಟ್ ಮಾಡುತ್ತಿದ್ದಾರೆ. ಈ ಹಿಂದೆ ಕುಲವಧು ಧಾರವಾಹಿಯಲ್ಲಿ ವೇದಾಂತ್ ಪಾತ್ರದಲ್ಲಿ ನಟಿಸಿದ್ದರು.