Saturday, August 13, 2022

Latest Posts

ಶಿವಸೇನೆ ಮುಖಂಡ ಸಂಜಯ್​ ರಾವತ್​ ಗೆ ಮತ್ತೆ ಇಡಿ ಬುಲಾವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಿವಸೇನೆ ಮುಖಂಡ, ರಾಜ್ಯಸಭೆ ಸದಸ್ಯ ಸಂಜಯ್​ ರಾವತ್​ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಎರಡನೇ ಸಮನ್ಸ್​​ ಜಾರಿ ಮಾಡಿದೆ. ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಸಂಜಯ್​ ರಾವತ್​ ಅವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಮೊದಲು ಸಮನ್ಸ್​ ನೀಡಿತ್ತು. ಆದರೆ, ಇಂದು ರಾವತ್​ ವಿಚಾರಣೆಗೆ ಹೋಗಿರಲಿಲ್ಲ. ಇತ್ತ, ಇವರ ಪರ ವಕೀಲರು 13-14 ದಿನಗಳ ಕಾಲಾವಕಾಶವನ್ನೂ ಇಡಿಗೆ ಕೋರಿದ್ದರು.
ಇದೀಗ ಮೂರೇ ದಿನಗಳ ಹೆಚ್ಚುವರಿ ಸಮಯವನ್ನು ನೀಡಿ ಜುಲೈ 1ಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖವಾದ ದಾಖಲೆಗಳನ್ನು ತರುವಂತೆ ರಾವುತ್ ಅವರಿಗೆ​ ತಿಳಿಸಲಾಗಿದೆ.ಪತ್ರಾಚಲ್ ಜಮೀನು ಹಗರಣಕ್ಕೆ ಸಂಬಂಧಿಸಿದಂತೆ ಸಮನ್ಸ್​​ ಜಾರಿ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss