Thursday, August 18, 2022

Latest Posts

8 ಕೋಟಿ ಬೆಲೆಬಾಳುವ ಐಷಾರಾಮಿ ಕಾರ್ ಇದ್ದರೂ, ಕರೆಂಟ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಶಿವಸೇನೆ ನಾಯಕ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ತನ್ನ ಬಳಿ 8 ಕೋಟಿ ಬೆಲೆಬಾಳುವ ಐಷಾರಾಮಿ ಕಾರ್ ರೋಲ್ಸ್ ರಾಯ್ಸ್​ನ್ನೇ ಇಟ್ಟುಕೊಂಡಿದ್ದರೂ ಕೂಡ 35,000 ರೂ ಬೆಲೆಯ ಕರೆಂಟ್ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರದ ಶಿವಸೇನಾ ಮುಖಂಡ ಸಂಜಯ್ ಗಾಯ್ಕ್​ವಾಡ್ ಕರೆಂಟ್ ಕದ್ದು ಸಿಕ್ಕಿಬಿದ್ದಿರುವ ಆರೋಪಿ.
ಇದೀಗ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಸರಬರಾಜು ಕಂಪನಿ ಎಫ್​​ಐಆರ್ ದಾಖಲಿಸಿದೆ. ಎಮ್​ಎಸ್​ಇಡಿಸಿಎಲ್​ ಹೆಚ್ಚುವರಿ ಇಂಜಿನಿಯರ್ ಅಶೋಕ್ ಬುಂದೆ ಗಾಯ್ಕ್​ವಾಡ್ ಅವರ ನಿರ್ಮಾಣ ಹಂತದ ನಿವಾಸದ ಬಳಿ ಈ ವಿದ್ಯುತ್ ಕಳ್ಳತನವನ್ನ ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ. ಈ ವೇಳೆ 34,840 ರೂ ಗಳ ವಿದ್ಯುತ್ ಬಿಲ್​ನ್ನು ಗಾಯ್ಕ್ ವಾಡ್ ಅವರಿಗೆ ಕಳುಹಿಸಲಾಗಿದ್ದು ಜೊತೆಗೆ 15,000 ಪೆನಾಲ್ಟಿ ವಿಧಿಸಲಾಗಿದೆ.
ಬಿಲ್ ಕಳುಹಿಸಿದ್ರೂ ಗಾಯ್ಕ್​ವಾಡ್ ಮೂರು ತಿಂಗಳ ನಂತರವೂ ಬಿಲ್​ ಪಾವತಿ ಮಾಡಿಲ್ಲವಾದ್ದರಿಂದ ಮಹಾತ್ಮ ಫುಲೆ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೇಂಟ್ ದಾಖಲಿಸಲಾಗಿದೆ. ನಂತರ ಗಾಯ್ಕ್ ವಾಡ್​​ವಿದ್ಯುತ್ ಬಿಲ್ ಜೊತೆಗೆ ಪೆನಾಲ್ಟಿಯನ್ನೂ ಪಾವತಿಸಿದ್ದು ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!