Tuesday, June 28, 2022

Latest Posts

ಮಹಾರಾಷ್ಟ್ರದ ಮೈತ್ರಿ ಪಕ್ಷದಲ್ಲಿ ಬಿರುಕು: ಮುಂಬರುವ ಚುನಾವಣೆಗಳಲ್ಲಿ ಪ್ರತ್ಯೇಕ ಸ್ಪರ್ಧೆ ಎಂದ ಕಾಂಗ್ರೆಸ್ ಗೆ ಶುಭ ಹಾರೈಸಿದ ಶಿವಸೇನೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮುಂಬರುವ ಎಲ್ಲ ಸ್ಥಳೀಯ ಆಡಳಿತಗಳ ಮತ್ತು ವಿಧಾನಸಭೆ ಚುನಾವಣೆಗಳನ್ನು ಕಾಂಗ್ರೆಸ್​ ಪ್ರತ್ಯೇಕವಾಗಿಯೇ ಎದುರಿಸಲಿದೆ. ಇನ್ನು ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ, ಮುಂಬರುವ ಚುನಾವಣೆಗಳಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸಲಿರುವ ಕಾಂಗ್ರೆಸ್​ಗೆ ನಾವು ಶುಭ ಹಾರೈಸುತ್ತೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ನಾಯಕ ಸಂಜಯ್​ ರಾವತ್​, ಪ್ರತಿಯೊಬ್ಬರೂ ಅವರವರ ಪಕ್ಷವನ್ನು ಬಲಪಡಿಸಲು ಮತ್ತು ವಿಸ್ತರಿಸಲು ಸ್ವತಂತ್ರ್ಯರಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಮಹಾ ವಿಕಾಸ್ ಅಘಾಡಿಯಲ್ಲಿ ಮೂರು ಪಕ್ಷಗಳು ಒಂದರೊಳಗೊಂದು ವಿಲೀನಗೊಂಡಿಲ್ಲ. ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡಿವೆಯಷ್ಟೇ. ಎಲ್ಲ ಚುನಾವಣೆಗಳನ್ನೂ ಒಟ್ಟಿಗೇ ಎದುರಿಸುತ್ತೇವೆ ಎಂಬ ಒಪ್ಪಂದವೂ ನಮ್ಮ ಮಧ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ .
ತಿವಾಸಾದಲ್ಲಿ ನಾನಾ ಪಟೋಲೆಯವರು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, 2024ರಲ್ಲಿ ನಾನಾ ಪಟೋಲೆಯನ್ನು ನೀವು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಶಿವಸೇನೆಯನ್ನು ಹೊಗಳಿದ್ದಕ್ಕೆ ಮುನಿಸಿಕೊಂಡಿರುವ ನಾನಾ ಪಟೋಲೆ, ಕಾಂಗ್ರೆಸ್​ ಮೂಲ ಪಕ್ಷ. ನಮಗೆ ಯಾರದ್ದೂ ಸರ್ಟಿಫಿಕೇಟ್​ ಬೇಡ. ಯಾರೇ ನಮ್ಮನ್ನು ಸೈಡ್​ಲೈನ್ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಿಲ್ಲ. 2024ರ ಹೊತ್ತಿಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ಬಲಿಷ್ಠ, ಉನ್ನತ ಪಕ್ಷವಾಗಿ ಬೆಳೆಯುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss