Wednesday, August 17, 2022

Latest Posts

ಖೇಲೋ ಇಂಡಿಯಾ ವಿಂಟರ್ಸ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಶಿವಮೊಗ್ಗದ ಲತಾ, ಧನಲಕ್ಷ್ಮೀ

ಹೊಸ ದಿಗಂತ ವರದಿ, ಶಿವಮೊಗ್ಗ :

ಕಾಶ್ಮೀರದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಂಟರ್ಸ್‌ ಗೇಮ್ಸ್‌ನಲ್ಲಿ ಕರ್ನಾಟಕ ಮೂವರು ಬಾಲಕಿಯರು ಚಿನ್ನದ ಪದಕ ಪಡೆದಿದ್ದು, ಇದರಲ್ಲಿ ಶಿವಮೊಗ್ಗ ತಾಲೂಕಿನ ಆಡಿನಕೊಟ್ಟಿಗೆ ಗ್ರಾಮದ ಲತಾ ಮತ್ತು ಧನಲಕ್ಷ್ಮೀ ಚಿನ್ನದ ಪದಕ ಪಡೆದಿದ್ದಾರೆ.
ಧನಲಕ್ಷ್ಮೀ 5 ಕಿಮೀ ಸ್ನೋ ಶೋಸ್ ಸೀನಿಯರ್ ಹಾಗೂ ಲತಾ 5 ಕಿಮೀ ಸ್ನೋ ಶೋಸ್ ಜ್ಯೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಇವರಿಬ್ಬರೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಹಾಗೂ ದಕ್ಷಿಣ ವಲಯ ಪರ್ವತಾರೋಹಣ ಪ್ರತಿಷ್ಠಾನ ಈ ಸಂಸ್ಥೆಗಳಿಂದ ತರಬೇತಿ ಪಡೆದು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕೊಡಗಿನ ಭವಾನಿ ಟಿ.ಎನ್. ನೊರ್ಡಿಕ್ ಸ್ಕೀಯಿಂಗ್ ಸ್ಪ್ರಿಂಟ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ನೊರ್ಡಿಕ್ ಸ್ಕೀಯಿಂಗ್ 5 ಕಿಮೀ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇವರು ಜವಾಹರಲಾಲ್ ನೆಹರೂ ಪರ್ವತಾರೋಹಣ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!