ಶಿವಣ್ಣನ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದ ‘ಘೋಸ್ಟ್’ ಲುಕ್’!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

60 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಶಿವರಾಜ್‌ಕುಮಾರ್‌ ಅವರ ‘ಘೋಸ್ಟ್’​ ಸಿನಿಮಾದ ಫಸ್ಟ್​ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ರೋಮಾಂಚನ‌ ಉಂಟುಮಾಡಿದೆ.

ಸಂದೇಶ್ ಪ್ರೊಡಕ್ಷನ್ಸ್‌ನಡಿ ಮೂಡಿಬರಲಿರುವ ಈ ಸಿನಿಮಾಗೆ, ‘ಓಲ್ಡ್ ಮಾಂಕ್’ ಸಿನಿಮಾ ಖ್ಯಾತಿಯ ನಟ ಶ್ರೀನಿ ಆಯಕ್ಷನ್‌ ನಿರ್ದೇಶನವಿದೆ.

ಅಂದಹಾಗೆ ‘ಘೋಸ್ಟ್’​ ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಕೂಡಾ ತೆರೆಕಾಣಲಿದೆ.
ನಟ ಕಿಚ್ಚ ಸುದೀಪ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ‘ಘೋಸ್ಟ್’​ ಪೋಸ್ಟರ್‌ ಬಿಡುಗಡೆ ಮಾಡಿದ್ದು ಶಿವರಾಜ್‌ಕುಮಾರ್‌ ಅವರಿಗೆ ಜನ್ಮದಿನದ ಶುಭಹಾರೈಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!