ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶಿವಮೊಗ್ಗ ಸ್ಮಾರ್ಟ್‌ಸಿಟಿ ಕಾಮಗಾರಿ ಸಂಪೂರ್ಣ ಕಳಪೆ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ದೂರು

ಹೊಸದಿಗಂತ ವರದಿ, ಶಿವಮೊಗ್ಗ:

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಸ್ಮಾರ್ಟ್‌ಸಿಟಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಮನಸ್ಸಿಗೆ ಬಂದ ಹಾಗೆ ಮಾಡಲಾಗುತ್ತಿದೆ. ಯಾವ ಮಾನದಂಡವನ್ನೂ ಪಾಲನೆ ಮಾಡುತ್ತಿಲ್ಲ. ಅಧಿಕಾರಿಗಳು ಕಾಮಗಾರಿಗಳು ನಡೆಯುವ ಸ್ಥಳಕ್ಕೆ ಭೇಟಿಯನ್ನೇ ನೀಡುವುದಿಲ್ಲ. ಕಾಮಗಾರಿ ಗುತ್ತಿಗೆ ಪಡೆದವರೇ ಬೇರೆ, ಇಲ್ಲಿ ಕೆಲಸ ಮಾಡುತ್ತಿರುವವರೇ ಬೇರೆ ಎಂದು ಆರೋಪಿಸಿದರು.

ಆದಿಚುಂಚನಗಿರಿ ರಸ್ತೆಯನ್ನೇ ತೆಗೆದುಕೊಂಡರೆ, ಅಲ್ಲಿ ಪಾದಚಾರಿ ರಸ್ತೆ ನಿರ್ಮಾಣ ಮಾಡುವಾಗ ನಿಗದಿತ ಅಳತೆಗೆ ತಕ್ಕ ಹಾಗೆ ಮಣ್ಣು ತೆಗೆದು ಗ್ರಾವೆಲ್ ಹಾಕಿಲ್ಲ. ಮೂರು ಹಂತದಲ್ಲಿ ವೆಟ್‌ಮಿಕ್ಸ್ ಹಾಕಬೇಕಿತ್ತು. ಕಾಂಕ್ರೀಟ್ ಹಾಕಿದ ನಂತರ ಒಂದು ಹನಿ ನೀರನ್ನೂ ಹಾಕಿಲ್ಲ. ಎಲ್ಲಾ ಕಡೆಯೂ ಇದೇ ರೀತಿ ಕಳಪೆ ಕಾಮಗಾರಿ ಮಾಡಲಾಗುತ್ತಿದೆ. ಈ ಕಾಮಗಾರಿಗಳು ಎರಡು ವರ್ಷ ಬಾಳಿಕೆ ಬರುವುದು ಕೂಡಾ ಅನುಮಾನ ಎಂದರು.

ಮಹಾನಗರ ಪಾಲಿಕೆ ಆಯುಕ್ತರೇ ಸ್ಮಾರ್ಟ್ ಸಿಟಿ ಎಂಡಿಯೂ ಆಗಿದ್ದಾರೆ. ಅವರು ಪಾಲಿಕೆ ಕಚೇರಿ ಮತ್ತು ಜಿಲ್ಲಾ ಮಂತ್ರಿಗಳ ಕಚೇರಿ ಬಿಟ್ಟು ಬೇರೆ ಕಡೆ ಓಡಾಡಿದ್ದನ್ನು ಜನರು ನೋಡೇ ಇಲ್ಲ. ಯಾವ ಕಾಮಗಾರಿ ವೀಕ್ಷಣೆಯನ್ನೂ ಮಾಡಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶಾಮೀಲಾಗಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ಹಾಗಾಗಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುತ್ತಿದೆ ಎಂದರು.

ಪಾಲಿಕೆ ವಿಪಕ್ಷ ನಾಯಕಿ ಯಮುನಾ, ಸದಸ್ಯರಾದ ಮಂಜುಳಾ, ಶಾಮೀರ್‌ಖಾನ್, ಪ್ರಮುಖರಾದ ರಾಮೇಗೌಡ, ಚಂದ್ರಭೂಪಾಲ್, ಚಂದನ್, ಆರಿಫ್, ಬಾಲಾಜಿ ಸುದ್ದಿಗೋಷ್ಠಿಯಲ್ಲಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss