ಮುಂಬೈಗೆ ಮರಳಿದರೆ ನಿಮ್ಮೆಲ್ಲಾ ಬೇಡಿಕೆ ಈಡೇರಿಸುತ್ತೇವೆ, ಅಘಾಡಿಯಿಂದ ಹೊರಬರಲೂ ಸಿದ್ಧರಿದ್ದೇವೆ: ಸಂಜಯ್‌ ರಾವತ್‌ ಹೊಸ ದಾಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಂಡಾಯವೆದ್ದ ಶಾಸಕರು ಗುವಾಹಟಿಯಲ್ಲಿ ಬೀಡು ಬಿಟ್ಟಿರುವುದರಿಂದ ಅವರನ್ನು ಪುನಃ ಮುಂಬೈಗೆ ಕರೆಸಲು ಶಿವಸೇನೆಯ ಸಂಜಯ್‌ ರಾವತ್‌ ಹೊಸ ದಾಳ ಉರುಳಿಸಿದ್ದಾರೆ. ಬಂಡಾಯ ಶಾಸಕರು ಪುನಃ ವಾಪಸ್ಸು ಬಂದರೆ ಮಹಾರಾಷ್ಟ್ರ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟದಿಂದ ಹೊರಬರಲು ಸಿದ್ಧರಿದ್ದೇವೆ ನಿಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ರಾವತ್‌ ಹೇಳಿದ್ದಾರೆ.

“ಎಲ್ಲಾ ಶಾಸಕರು ಮುಂಬೈಗೆ ಬರಬೇಕು ಗುವಾಹಟಿಯಿಂದ ಸಂವಹನ ನಡೆಸಬಾರದು. ಏನೇ ಸಮಸ್ಯೆಗಳಿದ್ದರೂ ಇಲ್ಲಿಗೆ ಬಂದು ಸಿಎಂ (ಉದ್ಧವ್‌ ಠಾಕ್ರೆ) ಅವರೊಂದಿಗೆ ಚರ್ಚಿಸಬೇಕು. ಶಿವಸೇನೆ ಎಂವಿಎ ಮೈತ್ರಿಕೂಟದಿಂದ ಹೊರಬರಬೇಕು ಎಂದು ಎಲ್ಲಾ ಶಾಸಕರು ಬಯಸಿದರೆ ಅದನ್ನು ಪರಿಗಣಿಸಲು ನಾವು ಸಿದ್ಧರಿದ್ದೇವೆ. ಆದರೆ ಇದಕ್ಕಾಗಿ ಅವರು ಮುಂಬೈಗೆ ವಾಪಸ್ಸಾಗಲೇ ಬೇಕು. ಅವರು (ಬಂಡಾಯ ಶಾಸಕರು) ಏನೇ ಬೇಡಿಕೆಯಿಟ್ಟರೂ ಅದನ್ನು ಇಡೇರಿಸಲಾಗುತ್ತದೆ” ಎಂದು ಸಂಜಯ್‌ ರಾವತ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!