ಹೊಸದಿಗಂತ ಆನ್ ಲೈನ್ ಡೆಸ್ಕ್:
ಪ್ರತಿಭಟನಾ ನಿರತ ಸಾರಿಗೆ ನೌಕರರ ವಿರುದ್ಧ ಬಿಎಂಟಿಸಿ ಮತ್ತೆ ಖಡಕ್ ನಿರ್ಧಾರ ಕೈಕೊಂಡಿದ್ದು, ಇಂದು 469 ಸಿಬ್ಬಂದಿಯನ್ನು ಅಮಾನತು ಮಾಡಿದೆ.
ಸಾರಿಗೆ ನೌಕರರ ಮುಷ್ಕರ ಇಂದಿಗೆ 11ನೇ ದಿನಕ್ಕೆ ಕಾಲಿಟ್ಟಿದೆ. ಎಷ್ಟೇ ಮನವಿ ಮಾಡಿಕೊಂಡರೂ ಕೆಲಸಕ್ಕೆ ಮರಳದ ಸಿಬ್ಬಂದಿ ವಿರುದ್ಧ ಕಠಿಣ ನಿಲುವು ತಾಳಿರುವ ಬಿಎಂಟಿಸಿ 469 ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಕರ್ತವ್ಯಕ್ಕೆ ಗೈರು ಹಾಜರು ಹಾಗೂ ಇತರರನ್ನೂ ಕೆಲಸಕ್ಕೆ ಹಾಜರಾಗದಂತೆ ಪ್ರಚೋದನೆ ನೀಡಿದ ಆರೋಪದ ಮೇಲೆ ಇವರನ್ನ ಅಮಾನತುಗೊಳಿಸಿದೆ. ಅಮಾನತಾದ ಎಲ್ಲಾ ಸಿಬ್ಬಂದಿ ಏಪ್ರಿಲ್ 19ರಂದು ತಮ್ಮ ಡಿಪೋಗಳಿಗೆ ತೆರಳಿ ಲಿಖಿತ ರೂಪದಲ್ಲಿ ಸಮಜಾಯಿಷಿ ನೀಡಬೇಕು. ಇಲ್ಲವಾದಲ್ಲಿ ಇವರೆಲ್ಲರನ್ನೂ ಸೇವೆಯಿಂದಲೇ ವಜಾಗೊಳಿಸಲಾಗುತ್ತದೆ ಎಂದು ಬಿಎಂಟಿಸಿ ಎಚ್ಚರಿಕೆಯನ್ನ ನೀಡಿದೆ.