Sunday, April 18, 2021

Latest Posts

ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಶಾಕ್: ಅಕ್ಷರ್​ ಪಟೇಲ್​ ಗೆ ಕೊರೋನಾ ಪಾಸಿಟಿವ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಡೆಲ್ಲಿ ಕ್ಯಾಪಿಟಲ್ಸ್​ ನ ಆಲ್​ರೌಂಡರ್​ ಅಕ್ಷರ್​ ಪಟೇಲ್​ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್​ ಬಂದಿದ್ದು , ಡೆಲ್ಲಿ ತಂಡಕ್ಕೆ ಆಘಾತ ತಂದಿದೆ.ಅವರು ಎಲ್ಲಾ ಪ್ರೋಟೋಕಾಲ್​ಗಳನ್ನು ಅನುಸರಿಸುತ್ತಿದ್ದು, ಐಸೋಲೇಟ್ ಆಗಿದ್ದಾರೆ ಎಂದು ಡಿಸಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಅಕ್ಷರ್​ಗೂ ಮೊದಲು ಕೋಲ್ಕತಾ ನೈಟ್ ರೈಡರ್ಸ್​ ತಂಡದ ಬ್ಯಾಟ್ಸ್​ಮನ್​ ನಿತೀಶ್ ರಾಣಾಗೂ ಮಾರ್ಚ್​ 22ರಂದು ಕೋವಿಡ್-19 ಸೋಂಕು ತಗುಲಿತ್ತು. ಐಸೋಲೇಸನ್​ ನಂತರ ಗುರವಾರ ನಡೆಸಿದ ಮತ್ತೊಂದು ಟೆಸ್ಟ್​ನಲ್ಲಿ ನೆಗೆಟಿವ್​ ಪಡೆದಿದ್ದರು.
ಬಿಸಿಸಿಐ ಎಸ್​ಒಪಿ ಪ್ರಕಾರ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದವರು, ಮಾದರಿ ತೆಗೆದುಕೊಂಡ ದಿನದಿಂದ 10 ದಿನಗಳ ಕಾಲ ಬಯೋಸೆಕ್ಯೂರ್​ ಹೊರಗೆ 10 ದಿನಗಳ ಐಸೋಲೇಟ್​ ಆಗಬೇಕಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss