ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾ ಕುಂಭ ಮೇಳ ದಿಂದ ಹೆಚ್ಚು ಪ್ರಸಿದ್ದಿ ಪಡೆದ ಮೋನಾಲಿಸಾ ನಟಿಸ್ಬೇಕಿದ್ದ ಸಿನಿಮಾ, ಶೂಟಿಂಗ್ ಮುನ್ನವೇ ವಿವಾದಕ್ಕೆ ಸಿಲುಕಿದೆ.
ಮೋನಾಲಿಸಾ, ದಿ ಡೈರಿ ಆಫ್ ಮಣಿಪುರ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಆದ್ರೆ ದಿ ಡೈರಿ ಆಫ್ ಮಣಿಪುರಿ ಆರಂಭದಲ್ಲಿಯೇ ವಿವಾದಗಳಿಂದ ಸುತ್ತುವರೆದಿದೆ. ಚಿತ್ರದ ನಿರ್ದೇಶಕ ಸನೋಜ್ ಮಿಶ್ರಾ (Director Sanoj Mishra) ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಆರೋಪಗಳ ನಂತ್ರ ಮಿಶ್ರಾ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಸನೋಜ್ ಮಿಶ್ರಾ, ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.ಈ ಮಂದಿ, ಮಾನಹಾನಿ ಮಾಡಿದ್ದಾರೆಂದು ಮಿಶ್ರಾ ಆರೋಪಿಸಿದ್ದಾರೆ.
10 ಕೋಟಿ ಬಜೆಟ್‌ನ ಈ ಚಿತ್ರಕ್ಕಾಗಿ ಮೊನಾಲಿಸಾಗೆ ಈಗಾಗಲೇ ಮಿಶ್ರಾ ಲಕ್ಷಾಂತರ ರೂಪಾಯಿ ನೀಡಿದ್ದಾರೆ. ಆದ್ರೆ ಮಿಶ್ರಾ ಹಣ ನೀಡಿಲ್ಲ ಎಂದು ಕೆಲವರು ಆರೋಪ ಮಾಡಿದ್ದಾರೆ. ಇದಲ್ಲದೆ ಸನೋಜ್ ಮಿಶ್ರಾ ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಈಗ ಮಿಶ್ರಾ, ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಎಫ್‌ಐಆರ್‌ನಲ್ಲಿ ವಾಸಿಂ ರಿಜ್ವಿ (ಜಿತೇಂದ್ರ ನಾರಾಯಣ್ ತ್ಯಾಗಿ), ರವಿ ಸುಧಾ ಚೌಧರಿ, ಮಹಿ ಆನಂದ್, ಮರುತ್ ಸಿಂಗ್ ಮತ್ತು ಯೂಟ್ಯೂಬ್ ಚಾನೆಲ್‌ನ ಮಾಲೀಕ ಅಭಿಷೇಕ್ ಉಪಾಧ್ಯಾಯ ಹೆಸರಿದೆ. ಈ ಐವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡ್ತಿದ್ದಾರೆ. ಮೋನಾಲಿಸಾ ಜೊತೆ ಸಿನಿಮಾ ಮಾಡೋದು ಅವರಿಗೆ ಇಷ್ಟವಿಲ್ಲ ಎಂದು ಮಿಶ್ರಾ ಆರೋಪ ಮಾಡಿದ್ದಾರೆ.
ಮಿಶ್ರಾ ಈವರೆಗೆ ಯಾವುದೇ ಸಿನಿಮಾ ಮಾಡಿಲ್ಲ, ಅವರ ಒಂದೇ ಒಂದು ಸಿನಿಮಾ ಬಿಡುಗಡೆಯಾಗಿಲ್ಲ. ಅವರು ಮುಗ್ದ ಹುಡುಗಿ ಮೋನಾಲಿಸಾರನ್ನು ನಂಬಿಸ್ತಿದ್ದಾರೆಂದು ರಿಜ್ವಿ ಇತ್ತೀಚೆಗೆ ಆರೋಪಿಸಿದ್ದರು. ಇದಕ್ಕೆ ಮಿಶ್ರಾ ಪ್ರತಿಕ್ರಿಯೆ ನೀಡಿದ್ದರು. ಮಿಶ್ರಾ ಆರೋಪ ಸುಳ್ಳು ಎಂದಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಮೋನಾಲಿಸಾಗೆ ಟ್ರೈನಿಂಗ್ ನೀಡ್ತಿರುವ ವಿಡಿಯೋಗಳನ್ನು ಪೋಸ್ಟ್ ಮಾಡಲಾಗ್ತಿದೆ. ಮೋನಾಲಿಸಾಗೆ ಮಿಶ್ರಾ ಹಣ ನೀಡಿರೋದಾಗಿ ಹೇಳಿದ್ದಾರೆ. ಆದ್ರೆ ಆರಂಭದಲ್ಲೇ ವಿವಾದ ಶುರುವಾಗಿರುವ ಕಾರಣ, ಮೋನಾಲಿಸಾ ಸಿನಿಮಾ ಮಾಡ್ತಾರಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.