ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ನಡುವೆ ಇಂದು ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.
ಪಂದ್ಯಕ್ಕೆ ಇನ್ನೇನು ಕೆಲವೇ ಸಮಯ ಇದೆ ಎನ್ನುವಂತೆ ಮುಂಬೈ ತಂಡಕ್ಕೆ ಆಘಾತವಾಗಿದೆ, ಮುಂಬೈ ತಂಡದ ವೇಗಿ ಜೋಫ್ರಾ ಆರ್ಚರ್ ಗಾಯದಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಮುಂಬೈ ಪರ 10 ಪಂದ್ಯ ಆಡಿದ ಜೋಫ್ರಾ ಬೌಲಿಂಗ್ಗೆ ಫಿದಾ ಆಗದವರಿಲ್ಲ, ಈ ಬಾರಿ ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದ್ದು, ಮುಂಬೈ ಉತ್ಸಾಹಕ್ಕೆ ಇದರಿಂದಾಗಿ ಬ್ರೇಕ್ ಬಿದ್ದಿದೆ, ಇನ್ನು ಆರ್ಸಿಬಿಗೆ ಜೋಫ್ರಾ ಇಲ್ಲದಿರುವುದು ಪ್ಲಸ್ ಪಾಯಿಂಟ್ ಆಗಲಿದೆ.