ಪಡಿತರ ಚೀಟಿದಾರರಿಗೆ ಶಾಕ್: ರದ್ದಾಗಲಿದೆ 10 ಲಕ್ಷ BPL ಕಾರ್ಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶಾದ್ಯಂತ ಲಕ್ಷಾಂತರ ಜನರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು.

ಕೇಂದ್ರ ಸರ್ಕಾರದಿಂದ ಪಡೆದ ಮಾಹಿತಿಯ ಪ್ರಕಾರ, ದೇಶದಲ್ಲಿ ಸುಮಾರು 10 ಲಕ್ಷ ಜನರು ಉಚಿತ ಪಡಿತರ (ಬಿಪಿಎಲ್ ) ಸೌಲಭ್ಯದ ಲಾಭವನ್ನು ಮೋಸದಿಂದ ಪಡೆಯುತ್ತಿದ್ದಾರೆ ಎಂದು ಹೇಳಿದೆ. ಈ ಎಲ್ಲಾ ಜನರ ಪಡಿತರ ಚೀಟಿಯನ್ನ ರದ್ದುಗೊಳಿಸಲಾಗುವುದು. ಸುಮಾರು 10 ಲಕ್ಷ ಜನರ ಪಡಿತರ ಚೀಟಿಗಳನ್ನ ಗುರುತಿಸಲಾಗಿದ್ದು, ಈ ಕಾರ್ಡ್’ಗಳನ್ನ ಶೀಘ್ರದಲ್ಲೇ ರದ್ದುಗೊಳಿಸಲಾಗುವುದು.

ಯಾರ ಕಾರ್ಡ್’ಗಳು ನಕಲಿ ಎಂದು ಕಂಡುಬಂದಿದೆಯೋ ಅಂತಹವರ ಕಾರ್ಡ್ ರದ್ದಾಗಲಿದೆ. ಪ್ರಸ್ತುತ, ದೇಶಾದ್ಯಂತ ಸುಮಾರು 80 ಕೋಟಿ ಜನರು ಉಚಿತ ಪಡಿತರ ಸೌಲಭ್ಯದ ಪ್ರಯೋಜನ ಪಡೆಯುತ್ತಿದ್ದಾರೆ. ಅನರ್ಹ ಪಡಿತರ ಚೀಟಿದಾರರಿಗೆ ಗೋಧಿ, ಅಕ್ಕಿ ಮತ್ತು ಕಡಲೆ ಉಚಿತ ಸಿಗುವುದಿಲ್ಲ.

ಅನರ್ಹರ ಸಂಪೂರ್ಣ ಪಟ್ಟಿಯನ್ನ ಡೀಲರ್’ಗೆ ಕಳುಹಿಸಲಾಗುವುದು. ಇದರ ನಂತರ, ವಿತರಕರು ಈ ಜನರಿಗೆ ಪಡಿತರವನ್ನ ನೀಡುವುದಿಲ್ಲ. ಡೀಲರ್ ಹೆಸರುಗಳನ್ನ ಗುರುತಿಸಿ ಮತ್ತು ಅಂತಹ ಕಾರ್ಡ್ ಹೊಂದಿರುವವರ ವರದಿಯನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸುತ್ತಾನೆ. ಅದರ ನಂತರ ಅವರ ಕಾರ್ಡ್’ಗಳನ್ನು ರದ್ದುಗೊಳಿಸಲಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!