Wednesday, August 17, 2022

Latest Posts

ಮಹಿಳೆಯ ಕಿವಿಯೊಳಗೆ ಜೇಡದ ವಾಸ: ಸ್ಕ್ಯಾನಿಂಗ್‌ ಮಾಡಿದ ವೈದ್ಯರು ಶಾಕ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಹಿಳೆಯೊಬ್ಬರು ಕಿವಿ ನೋವು ಎಂದು ಆಸ್ಪತ್ರೆಗೆ ಸೇರಿದ್ದರು. ಅವರ ಕಿವಿಯನ್ನು ಸ್ಕ್ಯಾನ್ ಮಾಡಿ, ವೈದ್ಯರೇ ದಂಗಾಗಿದ್ದಾರೆ. ಏಕೆಂದರೆ ಕಿವಿಯೊಳಗೆ ಜೀವಂತೆ ಜೇಡವಿತ್ತು.

ಹೌದು… ಚೀನಾದ ದಕ್ಷಿಣದಲ್ಲಿರುವ ಹುನಾನ್ ಪ್ರಾಂತ್ಯದ ಝೂಝೂ ಎಂಬ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಯೀ ಹೆಸರಿನ ಮಹಿಳೆಯೊಬ್ಬರು ತಮ್ಮ ಕಿವಿಯಲ್ಲಿ ವಿಚಿತ್ರ ಶಬ್ದದೊಂದಿಗೆ ಭಾರೀ ಕಿರಿಕಿರಿ ಅನುಭವವಾದ ಕಾರಣ ನೋವು ಕೂಡ ಹೆಚ್ಚಾಗಿ ವೈದ್ಯರ ಬಳಿ ತೆರಳಿದ್ದಾರೆ.

ವೈದ್ಯರು ಸ್ಕ್ಯಾನಿಂಗ್‌ ಮಾಡಿದಾಗ ಅಲ್ಲಿ ಕ್ರಿಮಿಯೊಂದು ಕಂಡುಬಂದಿದೆ. ನಂತರ ಪರೀಕ್ಷೆ ಮಾಡಿದಾಗ ಅದು ಜೇಡರ ಹುಳು ಎಂದು ತಿಳಿದಿದೆ. ಎಲೆಕ್ಟ್ರಿಕ್ ಓಟೋಸ್ಕೋಪ್ ಬಳಸಿಕೊಂಡು ನಂತರ ಜೇಡವನ್ನು ವೈದ್ಯರು ಹೊರತೆಗೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!