ಹೆಸರು ನೋಡಿ ಶಾಕ್: ಹೆರಿಗೆ ರಜೆಯಲ್ಲಿದ್ದ ಉದ್ಯೋಗಿಯನ್ನು ವಜಾಗೊಳಿಸಿದ ‘ಮೆಟಾ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಟಾ ಕಂಪೆನಿಯುಈ ತನಕ 11,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಈ ಬಗ್ಗೆ ಖುದ್ದು ಸಿಇಒ ಜುಕರ್​​ಬರ್ಗ್ ಮಾಹಿತಿಯನ್ನು ನೀಡಿದ್ದರು.

ಈ ರೀತಿ ಉದ್ಯೋಗದಿಂದ ವಜಾಗೊಂಡವರಲ್ಲಿ ಹೆರಿಗೆ ರಜೆಯಲ್ಲಿದ್ದ ಫೇಸ್​ಬುಕ್​ನ ಕಮ್ಯೂನಿಕೇಷನ್ ಮ್ಯಾನೇಜರ್ ಅನ್ನೆಕಾ ಪಟೇಲ್​ ಒಬ್ಬರು.

ತಮ್ಮ ಮಗುವನ್ನು ಎತ್ತಿಕೊಂಡ ಫೋಟೋ ಜೊತೆ ವಿವರವಾದ ಪೋಸ್ಟ್​ ಒಂದನ್ನು ಬರೆದು ಲಿಂಕ್ಡ್​ಇನ್​ ಗೆ ಹಾಕಿದ್ದ ಅನ್ನೆಕಾ ಪಟೇಲ್, ಈವತ್ತು ಬೆಳಗ್ಗೆ ಮೂರು ಗಂಟೆಗೆ ಎಚ್ಚರವಾಯಿತು. ನಾಲ್ಕು ಗಂಟೆಗೆ ನನ್ನ ಮೂರು ತಿಂಗಳ ಮಗು ಎಮಿಲಿಯಾಗೆ ಹಾಲು ಕುಡಿಸಿದೆ. ವಜಾಗೊಂಡ 11,000 ಉದ್ಯೋಗಿಗಳ ಪೈಕಿ ನಾನೂ ಒಬ್ಬಳಿರಬಹುದೆಂಬ ನಿರೀಕ್ಷೆಯಲ್ಲಿಯೇ ಆಫೀಸಿನ ಮೇಲ್​ ತೆರೆದು ನೋಡಿದೆ. ನನಗೂ ಮೇಲ್​ ಬಂದಿತ್ತು. ಸಹೋದ್ಯೋಗಿಗಳೊಂದಿಗೆ ವಿಚಾರಿಸಿದಾಗ ಅದು ಆಟೋಮ್ಯಾಟಿಕ್ ಆಗಿ ಬಂದ ಮೇಲ್​ ಎಂದರು. ಆಗ ಸಮಯ ನಾಲ್ಕೂವರೆ. ಮುಂದಿನ ಬದುಕು ಹೇಗೆ ಎಂದು ಯೋಚಿಸುತ್ತ ಮಗುವಿನೊಂದಿಗೆ ಮಲಗಿದಾಗ ನಾಲ್ಕೂ ಮುಕ್ಕಾಲು. ಮತ್ತೆ ಮಲಗಬೇಕೋ ಬೇಡವೋ ಎಂಬ ಸಂದಿಗ್ಧ ಕಾಡಿತು. 5.35ಕ್ಕೆ ಮತ್ತೊಂದು ಮೇಲ್​ ಬಂದಿತು. ವಜಾಗೊಳಿಸಿದ ಪಟ್ಟಿಯಲ್ಲಿ ನನ್ನ ಹೆಸರನ್ನೂ ನೋಡಿ ಆಘಾತವಾಯಿತು’ ಎಂದಿದ್ದಾರೆ ಅನ್ನೇಕಾ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!