ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋವಾದ ಕಲಂಗುಟ್ ಬೀಚ್ ನಲ್ಲಿ ದೋಣಿ ಮಗುಚಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 20 ಜನರನ್ನು ರಕ್ಷಿಸಲಾಗಿದೆ.
ಕಾರ್ಯಾಚರಣೆಯಲ್ಲಿ 13 ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಆರು ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಲೈಫ್ ಗಾರ್ಡ್ ಉಸ್ತುವಾರಿ ಸಂಜಯ್ ಯಾದವ್ ಈ ಕುರಿತು ಮಾಹಿತಿ ನೀಡಿದ್ದು, ಕಲಂಗುಟ್ ಬೀಚ್’ನಲ್ಲಿ ದೋಣಿ ಮಗುಚಿದ ಘಟನೆಯಲ್ಲಿ ನಾವು 13 ಜನರನ್ನ ರಕ್ಷಿಸಿದ್ದೇವೆ. ನಿಖರವಾದ ಜನರ ಸಂಖ್ಯೆ ನಮಗೆ ತಿಳಿದಿಲ್ಲ , ಆದರೆ ದೋಣಿಯ ಅಡಿಯಲ್ಲಿ ಸಿಲುಕಿದ್ದ ಒಂದೇ ಕುಟುಂಬದ ಸುಮಾರು 6 ಜನರು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಘಟನೆಗೆ ಕಾರಣವೇನೆಂದು ನಮಗೆ ತಿಳಿದಿಲ್ಲ. ಆ 6 ಜನರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.