ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರ್ವತಮಯ ಶಾಂಕ್ಸಿ ಪ್ರಾಂತ್ಯದ ಯಾನ್’ನ ಹೊರವಲಯದಲ್ಲಿ ಸೋಮವಾರ ತಡರಾತ್ರಿ ಸ್ಫೋಟ ಸಂಭವಿಸಿದೆ.ಸ್ಫೋಟದ ಸಮಯದಲ್ಲಿ ಒಟ್ಟು 90 ಗಣಿಗಾರರು ಕೆಲಸದಲ್ಲಿ ತೊಡಗಿದ್ದರು.
ಈ ಹಿಂದೆ ಇನ್ನರ್ ಮಂಗೋಲಿಯಾದ ಉತ್ತರ ಪ್ರದೇಶದಲ್ಲಿ ತೆರೆದ ಪಿಟ್ ಗಣಿ ಕುಸಿತದಿಂದ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.