ಹೊಸದಿಗಂತ ವರದಿ, ಮಂಗಳೂರು:
ಬಕೆಟ್‌ನ ನೀರಿನಲ್ಲಿ ಮುಳುಗಿ ಮಗುವೊಂದು ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯಮಂಜೇಶ್ವರದ ಕಡಂಬಾರಿನಲ್ಲಿ ನಡೆದಿದೆ.
ಕೆ.ಎ.ಹಾರೀಸ್ – ಖೈರುನ್ನೀಸಾ ದಂಪತಿಯ ಪುತ್ರಿ ಒಂದು ವರ್ಷ ಎರಡು ತಿಂಗಳು ಪ್ರಾಯದ ಫಾತಿಮಾ ಮೃತಪಟ್ಟ ಮಗು.
ಶನಿವಾರ ಸಂಜೆ ಈ ಘಟನೆ ನಡೆದಿತ್ತು. ಮನೆಮಂದಿ ಹೊರಗಡೆ ಇದ್ದ ವೇಳೆ ಮಗು ಬಚ್ಚಲು ಕೋಣೆಗೆ ತೆರಳಿ ಅಲ್ಲಿದ್ದ ಬಕೆಟ್‌ನೊಳಗೆ ಅಯತಪ್ಪಿ ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸಲಾಗಿತ್ತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಪೋಸೋಟು ಜುಮಾ ಮಸೀದಿಯಲ್ಲಿ ಅಂತಿಮ ವಿಧಿ ವಿಧಾನ ನಡೆಸಲಾಯಿತು.
ಮೃತ ಮಗು ಸಹೋದರ ಸಹೋದರಿಯರಾದ ಅಹಮ್ಮದ್ ಕಬೀರ್, ಶಾಹಿನ, ಶಂನಾ, ಆರೀಫ್ ಅವರನ್ನು ಅಗಲಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.