ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ ಗಢದ ಮುಂಗೇಲಿಯ ಸರ್ಗಾಂವ್’ನಲ್ಲಿ ಗುರುವಾರ ಕಬ್ಬಿಣದ ತಯಾರಿಕಾ ಕಾರ್ಖಾನೆಯ ಚಿಮಣಿ ಕುಸಿದಿದ್ದು, ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 25 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ.
ಗಾಯಗೊಂಡ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಸ್ಥಳದಲ್ಲಿದ್ದರು.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮುಂಗೇಲಿ ಜಿಲ್ಲಾಧಿಕಾರಿ ರಾಹುಲ್ ದೇವ್ ತಿಳಿಸಿದ್ದಾರೆ.