ಹೊಸದಿಗಂತ ಮುಂಡಗೋಡ:
ಓಣಿಕೇರಿ ಗ್ರಾಮದಲ್ಲಿ ರೈತನೊಬ್ಬ ಮರಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ರತ್ನೋಜಿ ಕೊಣನಕೇರಿ(55) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಈತನು ತನ್ನ ಹೆಸರಿನಲ್ಲಿರುವ 4 ಎಕರೆ ಇಪ್ಪತ್ತು ಗುಂಟೆ ಗದ್ದೆಯಲ್ಲಿ ಗೋವಿನ ಜೋಳ ಬೆಳೆಯುತ್ತಿದ್ದರು ಬೆಳೆಗೆ ಪಾಳಾ ಸಹಕಾರಿ ಸಂಘದಲ್ಲಿ ಸಾಲಮಾಡಿಕೊಂಡಿದ್ದರು ಆದರೆ ಬೆಳೆ ಸರಿಯಾಗಿ ಬಾರದ ಕಾರಣ ಮನಸ್ಸಿಗೆ ಹಚ್ಚಿಕೊಂಡು ಮರಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇಲ್ಲಿನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಇಲ್ಲಿನ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.