ಕೇರಳದಲ್ಲಿ ಆಘಾತಕಾರಿ ಘಟನೆ: ಸ್ಕ್ರಬ್ ಟೈಫಸ್‌ಗೆ ಏಳನೇ ತರಗತಿ ವಿದ್ಯಾರ್ಥಿ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಕ್ರಬ್ ಟೈಫಸ್ ಸೋಂಕು ಕೇರಳದಲ್ಲಿ ಮತ್ತೊಬ್ಬ ಬಾಲಕನನ್ನು ಬಲಿ ಪಡೆದಿದೆ.
ಕಿಲಿಮನೂರು ಮೂಲದ ಸಿದ್ಧಾರ್ಥ್ (11) ಮೃತಪಟ್ಟ ಬಾಲಕನಾಗಿದ್ದಾನೆ.
ಈತ ಕಿಲಿಮನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದು, ಜ್ವರದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದ. ಬಳಿಕ ಹೆಚ್ಚಿ ಚಿಕಿತ್ಸೆಗಾಗಿ ಆತನನ್ನು ಎಸ್‌ಎಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಘಟಿಸಿದ ಮೂರನೇ ಪ್ರಕರಣ ಇದಾಗಿದೆ.
ಸ್ಕ್ರಬ್ ಟೈಪಸ್ ಸೋಂಕು ಓರಿಯೆಂಟಿಯಾ ಸುಸುಂಗಾಮುಶಿ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ಬ್ಯಾಕ್ಟೀರಿಯಾ ಸೋಂಕಿತ ಲಾರ್ವಾ ಹುಳುಗಳ ಮುಖಾಂತರ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಗೆ ಕಡಿದು ಸ್ಕ್ರಬ್ ಟೈಫಸ್ ಜ್ವರಕ್ಕೆ ತುತ್ತಾದ ಲಾರ್ವಾಹುಳುಗಳು ಇನ್ನೊಬ್ಬರಿಗೆ ಕಚ್ಚಿದಾಗ ಅವರಲ್ಲಿಯೂ ಈ ಜ್ವರ ಕಾಣಿಸಿಕೊಳ್ಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!