SHOCKING | ಲಾಲೂ ಪ್ರಸಾದ್ ಯಾದವ್​ ಆರೋಗ್ಯ ಸ್ಥಿತಿ ಗಂಭೀರ: ಪಾಟ್ನಾದಿಂದ ದೆಹಲಿ​​ಗೆ ಏರ್​ಲಿಫ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರೀಯ ಜನತಾ ದಳ(ಆರ್​ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್​ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೋಸ್ಕರ ದೆಹಲಿಯ ಏಮ್ಸ್​​ಗೆ ಏರ್​ಲಿಫ್ಟ್ ಮಾಡಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಮೆಟ್ಟಿಲಿನಿಂದ ಕೆಳಗೆ ಬಿದ್ದಿರುವ ಲಾಲೂ ಪ್ರಸಾದ್​ ಯಾದವ್​ ಸದ್ಯ ಪಾಟ್ನಾದ ಪಾರಸ್​ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಇದೀಗ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಕಂಡು ಬಂದಿರುವ ಕಾರಣ ಏಮ್ಸ್​​​ಗೆ ಸ್ಥಳಾಂತರ ಮಾಡಲಾಗಿದೆ.
ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಸೋಮವಾರ ಬೆಳಗ್ಗೆ ಪಾರಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮೂಲಕ ವಿಚಾರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!