SHOCKING NEWS | ಬೆಂಗಳೂರಲ್ಲಿ ಮತ್ತೊಬ್ಬ ಶಂಕಿತ ಉಗ್ರ ಸಿಸಿಬಿ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬೆಂಗಳೂರಿನಲ್ಲಿ ಇಂದು ಮುಂಜಾನೆ ವೇಳೆಗೆ ಶಂಕಿತ ಉಗ್ರ ಅಖ್ತರ್‌ ಹುಸೇನ್‌ನನ್ನು ಬಂಧನ ಮಾಡಲಾಗಿತ್ತು. ಇದೀಗ ಅಖ್ತರ್ ಹುಸೇನ್ ಜೊತೆ ಸಂಪರ್ಕದಲ್ಲಿ ಇದ್ದ ಮತ್ತೊಬ್ಬ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಂಕಿತ ಉಗ್ರನನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ ಸಿಸಿಬಿ ಪೊಲೀಸರು ಶಂಕಿತ ಉಗ್ರನನ್ನು ಬಂಧಿಸಲಿದ್ದಾರೆ.
ಶಂಕಿತ ಉಗ್ರ ಅಖ್ತರ್‌ನನ್ನು ಕೋರ್ಟ್ ಆಗಸ್ಟ್ 3 ರ ವರೆಗೂ ಸಿಸಿಬಿ ವಶಕ್ಕೆ‌ ನೀಡಿ ಆದೇಶ ಹೊರಡಿಸಿದೆ. ಆರೋಪಿಯ ಜೊತೆ ಒಂದು ದೊಡ್ಡ ಗುಂಪು ಇದೆ. ಆ ಗುಂಪಿನ್ನು ಪತ್ತೆ ಹಚ್ಚಬೇಕಾದ ಅಗತ್ಯ ಇದೆ. ಆರೋಪಿ ಟೆಲಿಗ್ರಾಂ, ಫೇಸ್ ಬುಕ್ ಮೆಸೆಂಜರ್ ಸೇರಿ ಹಲವು ಗ್ರೂಪ್‌ಗಳನ್ನ ಹೊಂದಿದ್ದಾನೆ. ಅಲ್ಲದೆ, ಆರೋಪಿ ಜೊತೆ ಚೆನ್ನೈ, ಅಸ್ಸಾಂ ಹಾಗೂ ವೆಸ್ಟ್ ಬೆಂಗಾಲದಲ್ಲಿ ತನಿಖೆ‌ ಅಗತ್ಯ ಇದೆ. ತನಿಖೆ ಸಂಬಂಧ ಸಾಕಷ್ಟು ಸಾಕ್ಷ್ಯ ಗಳ ಸಂಗ್ರಹ ಅಗತ್ಯ ಇದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ನೀಡುವಂತೆ‌ ಸಿಸಿಬಿ ಮನವಿ ಮಾಡಿತ್ತು. ಸಿಸಿಬಿ ಮನವಿ ಪುರಸ್ಕರಿಸಿ‌ ಕೋರ್ಟ್ ಶಂಕಿತ ಉಗ್ರನನ್ನು 10 ದಿನಗಳ ಕಾಲ ಸಿಸಿಬಿ ವಶಕ್ಕೆ‌ ನೀಡಿದೆ
ಇನ್ನು ಶಂಕಿತ ಉಗ್ರ ಅಖ್ತರ್‌ ಹುಸೇನ್‌ಗೆ ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಜೊತೆ ಆತನ ಸಂಪರ್ಕವಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲಿಯೇ ಆತನ ಲಿಂಕ್‌ಗಳು ಹಾಗೂ ಉದ್ದೇಶಗಳು ಬಹಳ ಆತಂಕಕಾರಿಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!