SHOCKING NEWS | ಮನುಕುಲಕ್ಕೆ ಮತ್ತೊಂದು ಥ್ರೆಟ್: ಪತ್ತೆಯಾಗಿದೆ ಮಾರಣಾಂತಿಕ ಮಾರ್‍ಬುರ್ಗ್ ಸೋಂಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನುಕುಲವನ್ನೇ ದಿಕ್ಕೆಡಿಸಿದ ಕೋವಿಡ್, ಎಬೋಲೋ, ಮಂಕಿ ಪಾಕ್ಸ್ ಬೆನ್ನಿಗೇ ದೂರದ ಘನಾ ದೇಶದಿಂದ ಮತ್ತೊಂದು ಆತಂಕಕಾರಿ ವೈರಸ್ ಹೊರಬಿದ್ದಿದೆ.
ಮಾರಣಾಂತಿಕ ಎಬೋಲಾ ರೋಗ ಲಕ್ಷಣ ಈ ಮಾರ್‍ಬುರ್ಗ್ ಸೋಂಕು ಇಬ್ಬರನ್ನು ಬಲಿ ಪಡೆದಿದೆ.
ಜು.10 ರಂದು ಸೋಂಕು ಪತ್ತೆಯಾಗಿದ್ದು, ಬಳಿಕ ಸೆಹಗಲ್‌ನ  ಪ್ರಯೋಗಾಲಯದಲ್ಲಿ ಮತ್ತೆ ಪರೀಕ್ಷೆಗೊಳಪಡಿಸಿ ದೃಢಪಡಿಸಿಕೊಳ್ಳಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಘಾನಾ ಆರೋಗ್ಯ ಇಲಾಖೆ, ಸೋಂಕು ಪತ್ತೆಯಾದ ಕ್ಷಣದಿಂದ ದೇಶದಾದ್ಯಂತ ಹರಡುವಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದಿದೆ. ಪಶ್ಚಿಮ ಆಫ್ರಿಕಾದಲ್ಲಿ ಇದು ಎರಡನೇ ಸೋಂಕು ಹರಡುವಿಕೆ ಘಟನೆಯಾಗಿದೆ.  ಇದಕ್ಕೂ ಮೊದಲು ಕಳೆದ ವರ್ಷ ಗುನೇರಿಯಾ ಭಾಗದಲ್ಲಿ ಸೋಂಕು ಪತ್ತೆಯಾಗಿತ್ತು. ಅನಂತರ ಯಾವುದೇ ಪ್ರಕರಣಗಳು ಕಂಡು ಬಂದಿರಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!