SHOCKING NEWS | ಜಪಾನ್ ಸೇನಾ ಹೆಲಿಕಾಪ್ಟರ್ ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದಕ್ಷಿಣ ಜಪಾನಿನ ದ್ವೀಪದಿಂದ ಸುಮಾರು 10 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸೇನಾ ಹೆಲಿಕಾಪ್ಟರ್‌ ನಾಪತ್ತೆಯಾಗಿದೆ.

ಮಿಯಾಕೊ ದ್ವೀಪದ ಬಳಿ ಗುರುವಾರ ಸಂಜೆ ಮಿಷನ್‌ನಲ್ಲಿ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ UH-60 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ರಾಡಾರ್‌ನಿಂದ ಕಣ್ಮರೆಯಾಗಿತ್ತು ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ.ಹೆಲಿಕಾಪ್ಟರ್‌ಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಹೇಳಿದೆ.

ನಾಲ್ಕು ಗಸ್ತು ಹಡಗುಗಳು ಹುಡುಕಾಟದಲ್ಲಿ ಭಾಗವಹಿಸುತ್ತಿವೆ. ಆದರೆ ಕಾಣೆಯಾದ ವಿಮಾನದ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂದು ಸಂಸ್ಥೆ ಮಾಹಿತಿ ನೀಡಿದೆ.

ರಕ್ಷಣಾ ಸಚಿವಾಲಯವು ತನಿಖೆ ನಡೆಸುತ್ತಿದ್ದು, ಅವರ ಜೀವಗಳನ್ನು ಉಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ’ ಎಂದು ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!