SHOCKING NEWS | ಪ್ಯಾರಾ ಗ್ಲೈಡರ್ ಪತನ: ತಪ್ಪಿದ ಪ್ರಾಣಹಾನಿ!

ಹೊಸದಿಗಂತ ವರದಿ, ಮಡಿಕೇರಿ

ಪೈಲಟ್'(ಚಾಲಕ)ನ ನಿಯಂತ್ರಣ ತಪ್ಪಿದ ಪ್ಯಾರಾ ಗ್ಲೈಡರ್ ರಸ್ತೆಗೆ ಅಪ್ಪಳಿಸಿದ ಘಟನೆ ಪೊನ್ನಂಪೇಟೆ ತಾಲೂಕಿನ ಬಾಳೆಲೆ ಸಮೀಪದ ನಿಟ್ಟೂರು ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಅದೃಷ್ಟವಶಾತ್ ಅದರಲ್ಲಿದ್ದ ಇಬ್ಬರು ಸಣ್ಣಪುಟ್ಟ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶನಿವಾರ ಸಂಜೆ 4ಗಂಟೆ ಸುಮಾರಿಗೆ ನಿಟ್ಟೂರು ಗ್ರಾಮದ ಮಾಪಂಗಡ ಮುತ್ತಣ್ಣ ಎಂಬವರಿಗೆ ಸೇರಿದ ಎರಡು ಆಸನದ ಪ್ಯಾರಾ ಗ್ಲೈಡರ್’ನಲ್ಲಿ ಬೆಂಗಳೂರಿನ ಸಿದ್ದಾರ್ಥ್ ಎಂಬವರೊಂದಿಗೆ ಆಕಾಶದಲ್ಲಿ ಹಾರಲು ಯತ್ನಿಸಿದ ಸಂದರ್ಭ ಈ ದುರ್ಘಟನೆ ನಡೆದಿದೆ.
ಆಕಾಶ್ ಅವರನ್ನು ಕುಳ್ಳಿರಿಸಿ ಮೇಲೆ ಹಾರಲು ಯತ್ನಿಸಿದ ಸಂದರ್ಭ ಪ್ಯಾರಾ ಗ್ಲೈಡರ್’ನ ಇಂಜಿನ್ ದುರಸ್ತಿಗೀಡಾಗಿ ಪೈಲಟ್’ನ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಅದು ಹಠಾತ್ ಭೂಸ್ಪರ್ಶ ಮಾಡಿದೆ.

ನಿಟ್ಟೂರು ಗ್ರಾಮದ ಲಕ್ಷ್ಮಣ ತೀರ್ಥ ಸೇತುವೆಯ ಬಳಿ ಈ ಘಟನೆ ನಡೆಯುವ ಸಂದರ್ಭ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಅದು ಅಪ್ಪಳಿಸುವುದರಲ್ಲಿತ್ತು. ಆದರೆ ಕ್ಷಣಾರ್ಧದಲ್ಲಿ ಈ ಅನಾಹುತ ತಪ್ಪಿದ್ದು,ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಪ್ಯಾರಾ ಗ್ಲೈಡರ್ ಸಂಫೂರ್ಣ ಹಾನಿಗೀಡಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!