Friday, June 9, 2023

Latest Posts

SHOCKING NEWS | ನಮೀಬಿಯಾದಿಂದ ಭಾರತಕ್ಕೆ ಬಂದ ‘ಸಶಾ’ ಇನ್ನಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮೀಬಿಯಾದಿಂದ ಭಾರತಕ್ಕೆ ಕರೆ ತಂದ ಎಂಟು ಚಿರತೆಗಳಲ್ಲಿ ಒಂದು ಸೋಮವಾರ ಸಾವನ್ನಪ್ಪಿದೆ.

ಜನವರಿಯಲ್ಲಿ ಮೂತ್ರಪಿಂಡದ ಸೋಂಕಿಗೆ ಒಳಗಾದ ಚಿರತೆ ‘ಸಶಾ’ ಸೋಮವಾರ ಸಾವನ್ನಪ್ಪಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ನಿರ್ಜಲೀಕರಣ ಮತ್ತು ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳನ್ನ ಹೊಂದಿದೆ ಎಂದು ತಿಳಿದು ಬಂದಿತ್ತು.

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಹಾರಿದ ಚಿರತೆಗಳ ಮೊದಲ ಬ್ಯಾಚ್ ನ ಸಶಾ, ಕಳೆದ ವರ್ಷ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರು ಕುನೊದಲ್ಲಿ ಬಿಡುಗಡೆ ಮಾಡಿದ ಐದು ವರ್ಷದ ಎರಡು ಹೆಣ್ಣು ದೊಡ್ಡ ಚೀತಾಗಳಲ್ಲಿ ಒಂದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!