SHOCKING NEWS | ಹಾಡಹಗಲೇ ಶಿವಸೇನೆ ನಾಯಕ ಸುಧೀರ್ ಸೂರಿ ಗುಂಡಿಟ್ಟು ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಂಜಾಬ್ ಅಮೃತಸರದಲ್ಲಿ ಶಿವಸೇನೆ ನಾಯಕ ಸುಧೀರ್ ಸೂರಿ ಅವರನ್ನು ಗುಂಡಿಕ್ಕಿ ಹತ್ಯೆಮಾಡಲಾಗಿದೆ.

ಇಲ್ಲಿನ ನಗರದ ದೇವಾಲಯದ ಹೊರಗೆ ಈ ಘಟನೆ ನಡೆದಿದ್ದು, ಶಿವಸೇನಾ ನಾಯಕರು ದೇವಾಲಯದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು.ಈ ಸಮಯದಲ್ಲಿ ಜನಸಮೂಹದಿಂದ ಗುಂಡು ಹಾರಿಸಿ, ಹತ್ಯೆಗೈದಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುನ್ನ ಗುರುವಾರ, ಟಿಬ್ಬಾ ರಸ್ತೆಯ ಗ್ರೆವಾಲ್ ಕಾಲೋನಿಯಲ್ಲಿರುವ ಪಂಜಾಬ್ ಶಿವಸೇನೆ ನಾಯಕ ಅಶ್ವನಿ ಚೋಪ್ರಾ ಅವರ ಮನೆಯ ಬಳಿ ಬೈಸಿಕಲ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!