SHOCKING NEWS | ಕಾಸರಗೋಡಿನ ವ್ಯಕ್ತಿಯ ಶವ ಮಂಗಳೂರಿನ ಲಾಡ್ಜ್​ನಲ್ಲಿ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಂಗಳೂರು ನಗರದ ಪಂಪ್​ವೆಲ್ ಬಳಿಯ ಲಾಡ್ಜ್​ನಲ್ಲಿ ಇಂದು ವ್ಯಕ್ತಿಯ ಶವ ಪತ್ತೆಯಾಗಿದೆ.

ಇಲ್ಲಿನ ಪದ್ಮಶ್ರೀ ಲಾಡ್ಜ್​ನಲ್ಲಿ ಕಾಸರಗೋಡಿನ ಉಪ್ಪಳ ನಿವಾಸಿ ಅಬ್ದುಲ್ ಕರೀಮ್ ಎನ್ನುವರ ಮೃತ ದೇಹ ಪತ್ತೆಯಾಗಿದೆ. ಇದೇ ವೇಳೆ ಶವದ ಪಕ್ಕದಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿದ್ದು, ಹಲವು ಅನುಮಾನಗಳು ವ್ಯಕ್ತವಾಗಿವೆ.

ಇನ್ನು ಅಬ್ದುಲ್ ಕರೀಮ್ ಎನ್ನುವಾತ ನಿನ್ನೆ ಬೆಳಗ್ಗೆ ಪದ್ಮಶ್ರೀ ಲಾಡ್ಜ್​ನಲ್ಲಿ ರೂಮ್ ಪಡೆದುಕೊಂಡಿದ್ದರು. ಮತ್ತು ಕೆಲವು ಸಮಯದ ಹಿಂದೆ ಮಹಿಳೆಯೊಬ್ಬರು ಮೃತ ವ್ಯಕ್ತಿಯನ್ನು ಭೇಟಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕರೀಂ ಕುಟುಂಬಸ್ಥರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವು ಎಂದು ದೂರು ನೀಡಿದ್ದು, ಪೊಲೀಸದರು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!