SHOCKING | ವಿಜಯಪುರದಲ್ಲಿ ಆಘಾತಕಾರಿ ಘಟನೆ: ಉರಿ ಬಿಸಿಲಿಗೆ ಬಾಲಕ ಬಲಿ

ಹೊಸದಿಗಂತ ವರದಿ, ವಿಜಯಪುರ: ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಬಿಸಿಲ ಬೇಗೆಗೆ ಓರ್ವ ಬಾಲಕ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಇಲ್ಲಿನ ಶ್ರೀಶೈಲ ಬಿರಾದಾರ ( 15 ) ಮೃತ ಪಟ್ಟ ಬಾಲಕ. ಶ್ರೀಶೈಲ ಬಿರಾದಾರ ಬೇಸಿಗೆ ರಜೆ ಹಿನ್ನೆಲೆ ಬಿಸಿಲಿನಲ್ಲಿ ಆಟ ಆಡಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ. 8 ನೇ ತರಗತಿ ಪಾಸಾಗಿದ್ದ ಶ್ರೀಶೈಲ, ತಾಲೂಕು ಮಟ್ಟದ ಕಬಡ್ಡಿ, ಖೋಖೋ ಚಾಂಪಿಯನ್ ಆಗಿದ್ದನು. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.