ಕರಾಚಿ ಚಿಕಿತ್ಸಾಲಯದಲ್ಲಿ ಗುಂಡಿನ ದಾಳಿ: ಚೀನಿ ಪ್ರಜೆ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಪಾಕಿಸ್ತಾನದ ಕರಾಚಿಯಲ್ಲಿ ದಂತ ಚಿಕಿತ್ಸಾಲಯದೊಳಗೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ ಪರಿಣಾಮ ಚೀನಾದ ಪ್ರಜೆಯೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

ಮೂವರೂ ವಿದೇಶಿ ಪ್ರಜೆಗಳಾಗಿದ್ದು, ದಾಳಿಕೋರರು ರೋಗಿಯಂತೆ ನಟಿಸಿ ಕ್ಲಿನಿಕ್‌ಗೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ.

ಮೂವರನ್ನು ರೋನಿಲ್ ಡಿ ರೈಮಂಡ್ ಚಾವ್, ಮಾರ್ಗರೇಡ್ ಮತ್ತು ರಿಚರ್ಡ್ ಎಂದು ಗುರುತಿಸಲಾಗಿದೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಹೊಟ್ಟೆಗೆ ಬುಲೆಟ್ ತಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!