ʼಪಾಕಿಸ್ತಾನ್ ಜಿಂದಾಬಾದ್‌ʼ ಹಾಡು ಹಾಕಿದ್ದ ಮುಸ್ಲಿಂ ಯುವಕರು ಅಂದರ್‌; ʼಅವಿದ್ಯಾವಂತರುʼ ಬಿಟ್ಟುಬಿಡುವಂತೆ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಇರುವ ಅಂಗಡಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಹಾಡು ಹಾಕಿದ್ದ ಇಬ್ಬರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಭೂತಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಘೈ ಕಲಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಿರಾಣಿ ಅಂಗಡಿ ನಡೆಸುತ್ತಿರುವ ಇಬ್ಬರು ಮುಸ್ಲಿಂ ಯುವಕರು “ಪಾಕಿಸ್ತಾನ್ ಜಿಂದಾಬಾದ್” ಎಂದ ಘೋಷಣೆಗಳಿಂದ ಕೂಡಿರುವ ಹಾಡನ್ನು ಜೋರಾಗಿ ಪ್ಲೇ ಮಾಡಿದ್ದಾರೆ. ಈದನ್ನು ಗಮನಿಸಿದ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಅಂಗಡಿಯತ್ತ ಬಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಹಾಡನ್ನು ಬಂದ್‌ ಮಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಯುವಕರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸ್ಥಳೀಯ ಬಿಜೆಪಿ ನಾಯಕರು ಸಲ್ಲಿಸಿದ ದೂರಿನನ್ವಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಎಫ್‌ಐಆರ್ ದಾಖಲಿಸಿದ್ದಾರೆ.
ದೇಶದ್ರೋಹಿ ಕೃತ್ಯದ ಸಂಬಂಧ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬರೇಲಿ ಎಸ್‌ಪಿ ರಾಜ್‌ಕುಮಾರ್ ಅಗರ್ವಾಲ್ ಹೇಳಿದ್ದಾರೆ.
ಏತನ್ಮಧ್ಯೆ, ಯುವಕರ ತಾಯಿ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನಿ ಜಿಂದಾಬಾದ್‌ ಹಾಡು ಹಾಕಿರುವುದರ ಬಗ್ಗೆ ಕುಟುಂಬಕ್ಕೆ ತಿಳಿದಿಲ್ಲ ಎಂದಿದ್ದಾರೆ. ಅಂದು ಏನಾಯಿತು ಎಂದು ನಮಗೆ ನಿಖರವಾಗಿ ತಿಳಿದಿಲ್ಲ, ನನ್ನ ಕಿರಿಯ ಮಗ ಮೊಬೈಲ್ ಫೋನ್‌ನಲ್ಲಿ ಧಾರ್ಮಿಕ ಹಾಡುಗಳನ್ನು ಹಾಕುವ ಹವ್ಯಾಸ ಹೊಂದಿದ್ದಾನೆ. ಹಾಡಿನಲ್ಲಿ ಅಂತಹ ಘೋಷಣೆಗಳು ಇವೆ ಎಂಬುದು ಆತನಿಗೆ ತಿಳಿದಿರಲಿಲ್ಲ. ನಾವು ಎಂದಿಗೂ ಮೊಬೈಲ್ ಫೋನ್‌ನಲ್ಲಿ ಅಂತಹ ಹಾಡುಗಳನ್ನು ಪ್ಲೇ ಮಾಡಿಲ್ಲ. ಅವನು ಅವಿದ್ಯಾವಂತ. ದಯವಿಟ್ಟು ಆತನನ್ನು ಬಿಡುಗಡೆ ಮಾಡಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಇಂತಹ ಘೋಷಣೆಗಳು ಕೇಳಿಬರುತ್ತರುವುದು ಇದೇ ಮೊದಲಲ್ಲ. ಕಳೆದ ವರ್ಷ ಯುಪಿಯ ನೋಯ್ಡಾದಲ್ಲಿ ನಡೆದಿದ್ದ ಇದೇ ರೀತಿಯ ಘಟನೆಯಲ್ಲಿ, ಧಾರ್ಮಿಕ ಮೆರವಣಿಗೆ ವೇಳೆ “ಪಾಕಿಸ್ತಾನ್ ಜಿಂದಾಬಾದ್” ಘೋಷಣೆಯನ್ನು ಕೂಗಿದ್ದಕ್ಕಾಗಿ ಮೂವರನ್ನು ಬಂಧಿಸಲಾಗಿತ್ತು.
ಸೆಕ್ಟರ್ 20 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈದ್ ಮಿಲಾದ್-ಉನ್-ನಬಿ ಮೆರವಣಿಗೆ ವೇಳೆ ಕೆಲ ಯುವಕರು ಪಾಕಿಸ್ತಾನದ ಪರ ಘೋಷಣೆ ಕೂಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಬಂಧಿಸಲಾಗಿತ್ತು. ಆಗ ಮೊಹಮ್ಮದ್ ಜಾಫರ್, ಸಮೀರ್ ಅಲಿ ಮತ್ತು ಅಲಿ ರಜಾ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!